ಈಗಷ್ಟೇ ಶಿಕ್ಷಕರ ದಿನ ಆಚರಣೆ ಮಾಡಿ ಮುಗಿಸಿದ್ದೇವೆ. ಕಾಲೇಜಿನ ಮಕ್ಕಳೆ ಕ್ಲಾಸ್ ನಲ್ಲಿ ನಿದ್ರೆ ಹೊಡೆಯುತ್ತಾರೆ.. ಇನ್ನು ಚಿಕ್ಕ ಮಕ್ಕಳು ನಿದ್ರೆ ಮಾಡಿದರೆ ಯಾವ ತಪ್ಪು ಇಲ್ಲ? ಆದರೆ ಈ ವಿಡಿಯೋ ಅದೆಲ್ಲವನ್ನು ಮೀರಿಸುತ್ತಿದೆ. ನಿದ್ರೆ ಮಾಡಿದ 4 ವರ್ಷದ ಮಗು ಮಾಡಿದ ಕೆಲಸ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಓಡುತ್ತಿದೆ. ಇದು ನಮ್ಮ ದೇಶದ ಘಟನೆಯಲ್ಲ ಬಿಡಿ.

ಫಿಲಿಫೈನ್ಸ್ ಶಾಲೆಯೊಂದರಲ್ಲಿ ಊಟದ ಸಮಯದಲ್ಲಿ ನಡೆದ ಘಟನೆ ನಿಜಕ್ಕೂ ಒಂದು ನಗು ಮೂಡಿಸುತಯ್ತದೆ. ಕ್ಲಾಸ್ ನಡೆಯುವ ವೇಳೆ ಗಾಢ ನಿದ್ರೆಗೆ ಜಾರಿದ್ದ ಮಗು ಎದ್ದು ಹೋಗುವಾಗ ತನ್ನೊಂದಿಗೆ ಕುಳಿತಿದ್ದ ಕುರ್ಚಿಯನ್ನು ತೆಗೆದುಕೊಂಡು ಹೋಗಿದೆ!
ಸ್ಕೂಲ್ ಬ್ಯಾಗ್ ಎಂದು ಭಾವಿಸಿ ಕುರ್ಚಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತಕ್ಷಣ ಮಗುವಿನ ಅವಸ್ಥೆ ಕಂಡ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಮಗುವನ್ನು ವಾಪಸ್ ಕರೆದು ಕುರ್ಚಿಯನ್ನು ಮೂಲ ಸ್ಥಾನದಲ್ಲಿರಿಸಿದ್ದಾರೆ. ವಿಡಿಯೋ ನೀವು ನೋಡಿಕೊಂಡು ಬನ್ನಿ...

Last Updated 9, Sep 2018, 9:16 PM IST