ರಾಜಕಾರಣದಲ್ಲಿ ಒಬ್ಬರು ಮತ್ತೊಬ್ಬರ ಕಾಲೆಳೆಯುವುದು, ಟೀಕಿಸಲು ಹೋಗಿ ಮುಜುಗರಕ್ಕೆ ಒಳಗಾಗುವುದು ಸಾಮಾನ್ಯ. ಮಹಾರಾಷ್ಟ್ರ ಶಾಸಕರೊಬ್ಬರು ನಟಿ ಹೇಮಾಮಾಲಿನಿ ವಿರುದ್ಧ ವಿಲಕ್ಷಣವಾದ ಕಾಮೆಂಟ್ ಮಾಡಿ ತೊಂದರೆಗೆ ಸಿಲುಕಿಕೊಂಡಿದ್ದಾರೆ.
ನವದೆಹಲಿ (ಏ.14): ರಾಜಕಾರಣದಲ್ಲಿ ಒಬ್ಬರು ಮತ್ತೊಬ್ಬರ ಕಾಲೆಳೆಯುವುದು, ಟೀಕಿಸಲು ಹೋಗಿ ಮುಜುಗರಕ್ಕೆ ಒಳಗಾಗುವುದು ಸಾಮಾನ್ಯ. ಮಹಾರಾಷ್ಟ್ರ ಶಾಸಕರೊಬ್ಬರು ನಟಿ ಹೇಮಾಮಾಲಿನಿ ವಿರುದ್ಧ ವಿಲಕ್ಷಣವಾದ ಕಾಮೆಂಟ್ ಮಾಡಿ ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಸ್ವತಂತ್ರ ಶಾಸಕ ಬಚ್ಚು ಕಾಡು ರೈತರ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪಿಸುತ್ತಾ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿನಿತ್ಯ ಕುಡಿಯುತ್ತಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ವಿವಾದವನ್ನು ಹುಟ್ಟು ಹಾಕಿದೆ.
ರೈತರು ಕುಡಿಯುವುದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಜನರು ಹೇಳುತ್ತಾರೆ. ಇದು ಸರಿಯಲ್ಲ. ಯಾರು ಕುಡಿಯುವುದಿಲ್ಲ ಹೇಳಿ? ಶೇ. 75 ರಷ್ಟು ಶಾಸಕರು, ಸಂಸದರು, ಪತ್ರಕರ್ತರು ಕುಡಿಯುತ್ತಾರೆ. ಹೇಮಾಮಾಲಿನಿ ಪ್ರತಿದಿನ ಕುಡಿಯುತ್ತಾರೆ, ಆದರೂ ಆತ್ಮಹತ್ಯೆಗೆ ಶರಣಾಗಿಲ್ಲ ಎಂದು ಕಾಡು ಹೇಳಿಕೆ ನೀಡಿ ಪೇಚಿಕೆ ಸಿಲುಕಿಕೊಂಡಿದ್ದಾರೆ.
