ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಹೆಬ್ಬೆಟ್ಟು ಮಂಜ ಮತ್ತೆ ಆಕ್ಟಿವ್ ಆಗಿದ್ದಾನಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಬೆಂಗಳೂರು(ಅ.20): ಕೆಲ ದಿನಗಳಿಂದ ಸೈಲೆಂಟಾಗಿದ್ದ ಹೆಬ್ಬೆಟ್ಟು ಮಂಜ ಮತ್ತೆ ಆಕ್ಟೀವ್ ಆಗಿದ್ದಾನೆ. ಲ್ಯಾಂಡ್ ಡಿಲೀಂಗ್ ಸೆಟ್ಲ್`ಮೆಂಟ್ಗೆ ಸಂಬಂಧಪಟ್ಟಂತೆ ಮಧುಸೂದನ್ ರೆಡ್ಡಿ ಎಂಬಾತನನ್ನ ಕಿಡ್ನ್ಯಾಪ್ ಮಾಡಿದ್ದ ಹೆಬ್ಬೆಟ್ಟು ಮಂಜನ ಸಹಚರರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇನ್ನು ಮುಂದೆ ಬೆಂಗಳೂರಿನ ಸೆಟ್ಲ್`ಮೆಂಟ್ ಗಳಲ್ಲಿ ನಾನು ತಲೆ ಹಾಕೋಲ್ಲ ಅಂತಾ ಪರಿ ಪರಿ ಕೇಳಿಕೊಂಡರೂ ಬಿಡದೇ ಮನಸ್ಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆಬ್ಬೆಟ್ಟು ಮಂಜ ಮತ್ತೆ ಆಕ್ಟಿವ್ ಆಗಿದ್ದಾನಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕಿಡ್ನ್ಯಾಪ್ ಆದ ಮಧುಸೂದನ್ ರೆಡ್ಡಿ, ಆಂಧ್ರದಲ್ಲಿ ರಕ್ತ ಚರಿತ್ರೆ ಸೃಷ್ಟಿಸಿದ್ದ ಮದ್ದಲ ಚೆಲುವು ಸೂರಿ ಸಹಚರನಾಗಿದ್ದಾನೆ. ಘಟನೆ ಎಲ್ಲಿ ಯಾವಾಗ ನಡೆಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಹೆಬ್ಬೆಟ್ಟು ಮಂಜ ಮಲೇಶಿಯಾ ಅಥವಾ ಸಿಂಗಾಪುರದಲ್ಲಿ ಅಡಗಿದ್ದಾನಾ ಎಂಬ ಅನುಮಾನ ಪೊಲೀಸರಿಗಿದ್ದು, 12 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೆಬ್ಬೆಟ್ಟು ಮಂಜನ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಸಹ ಜಾರಿಯಾಗಿದೆ.
