ಪಾಕಿಸ್ತಾನ ದಾಳಿಗೆ ತಕ್ಕ ಪ್ರತ್ತ್ಯುತ್ತರ ನೀಡುವಂತೆ ಯೋಧರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಮ್ಮು (ಅ.28): ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ್ ರೇಂಜರ್ಸ್ ಶೆಲ್ ದಾಳಿಯನ್ನು ಮುಂದುವರೆಸಿದ್ದಾರೆ.
ನೌಶೇರಾ, ಸುಂದರ್ಬನಿ, ಹಾಗೂ ಪಲ್ಲಾನ್ವಾಲ ಸೆಕ್ಟರ್’ನಲ್ಲಿ ಶುಕ್ರವಾರ ಜಾವದಿಂದ ಪಾಕಿಸ್ತಾನ್ ಸೈನಿಕರು ಭಾರಿ ಶೆಲ್ ದಾಳಿಯನ್ನು ಮುಂದುವರೆಸಿದ್ದಾರೆ.
ಕಳೆದ 12 ಗಂಟೆಗಳಲ್ಲಿ ಪಾಕಿಸ್ತಾನವು 6 ಬಾರಿ ಕದನ ವಿರಾಮ ಉಲ್ಲಂಘಿಸಿದೆ.
ಪಾಕಿಸ್ತಾನ ದಾಳಿಗೆ ತಕ್ಕ ಪ್ರತ್ತ್ಯುತ್ತರ ನೀಡುವಂತೆ ಯೋಧರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಬಳಿ ಒಟ್ಟು ಆರು ಸ್ಥಳಗಳಲ್ಲಿ ಪಾಕಿಸ್ತಾನವು ಕದಮ ವಿರಾಮ ಉಲ್ಲಂಘಿಸಿರುವ ಬಗ್ಗೆ ವರದಿಯಾಗಿದೆ.
ಆರ್‌ಎಸ್ ಪುರ ಮತ್ತು ಅರ್ನಿಯಾ ವಲಯದಲ್ಲಿ ಪಾಕಿಸ್ತಾನ ನಿನ್ನೆ ನಡೆಸಿದ ದಾಳಿಯಲ್ಲಿ ಭದ್ರತಾ ಪಡೆಯ ಯೋಧ ಹುತಾತ್ಮರಾಗಿದ್ದು ಆರು ನಾಗರಿಕರು ಗಾಯಗೊಂಡಿದ್ದಾರೆ.