ಬೆಂಗಳೂರಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಬೆಂಗಳೂರು ಜನ ಮತ್ತೆ ಬೆಚ್ಚಿಬಿದ್ದಿದ್ದಾರೆ. ಶಾಂತಿನಗರ, ಕೋರಮಂಗಲ ಸೇರಿ ಹಲವೆಡೆ ಭಾರೀ ಮಳೆ ಸುರಿದಿದೆ.

ಬೆಂಗಳೂರು(ಸೆ.02): ಬೆಂಗಳೂರಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಬೆಂಗಳೂರು ಜನ ಮತ್ತೆ ಬೆಚ್ಚಿಬಿದ್ದಿದ್ದಾರೆ. ಶಾಂತಿನಗರ, ಕೋರಮಂಗಲ ಸೇರಿ ಹಲವೆಡೆ ಭಾರೀ ಮಳೆ ಸುರಿದಿದೆ.

ಶಿವಾನಂದ ವೃತ್ತದ ರೈಲ್ವೆ ಸೇತುವೆ, ಓಕಳಿಪುರ ಸೇತುವೆ, ಆನಂದರಾವ್‌ ವೃತ್ತ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಎದುರಿನ ರಸ್ತೆ, ವಿಜಯನಗರ ಸೇತುವೆ, ಕೆ.ಆರ್‌.ವೃತ್ತದ ಕೆಳ ಸೇತುವೆ, ಮೆಜೆಸ್ಟಿಕ್‌ ಬಳಿಯ ರೈಲ್ವೆ ಸೇತುವೆಗಳಲ್ಲಿ 4ರಿಂದ 6 ಅಡಿಯಷ್ಟು ನೀರು ನಿಂತುಕೊಂಡಿತ್ತು. ಚಾಲುಕ್ಯ ವೃತ್ತದಿಂದ ಶಿವಾನಂದ ವೃತ್ತದ ಮೂಲಕ ಶೇಷಾದ್ರಿಪುರ ಹಾಗೂ ಮಲ್ಲೇಶ್ವರಕ್ಕೆ ಹೊರಟಿದ್ದ ವಾಹನಗಳು ನಿಂತ ನೀರಿನಲ್ಲಿ ಸಂಚರಿಸಿದವು.

ಈ ವೇಳೆ ನಾಲ್ಕು ವಾಹನಗಳು ಕೆಟ್ಟು ನಿಂತಿದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್‌ ಆಯಿತು. ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನವರೆಗೆ ನಗರದಲ್ಲಿ 72 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ