ಮಳೆಯ ಆರ್ಭಟಕ್ಕೆ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವಂತಾಗಿದೆ.

ಬೆಂಗಳೂರು(ಸೆ.10): ಉದ್ಯಾನನಗರಿಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ಮೊನ್ನೆಯಷ್ಟೇ ನಾಲ್ವರನ್ನ ಬಲಿ ಪಡೆದ ಮಳೆ, ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ.

ಮಳೆಯ ಆರ್ಭಟಕ್ಕೆ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವಂತಾಗಿದೆ. ಬಸ್​​'ಗಳು ನೀರಿನಲ್ಲಿ ಮುಳುಗಿವೆ. ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ, ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿದೆ. ಎಚ್​​ಎಸ್​ಆರ್​ ಲೇ ಔಟ್​ ಸಂಪೂರ್ಣ ಜಲಾವೃತಗೊಂಡಿವೆ.

ಇನ್ನು ವಿಶ್ವೇಶ್ವರಯ್ಯ ಲೇಔಟ್​'ನಲ್ಲೂ ಮಳೆಯ ಆರ್ಭಟ ಜೋರಾಗಿದ್ದು ಮೊಣಕಾಲಿನವರೆಗೂ ನೀರು ನಿಂತಿದೆ. ಇನ್ನು ಕೋರಮಂಗಲ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಹೆಬ್ಬಾಳ, ಯಶವಂತಪುರ ಸೇರಿದಂತೆ ನಗರದಾದ್ಯಂತ ಧಾರಾಕಾರ ಮಳೆಯಾಗಿದೆ. ಆದರೆ ಮಳೆಯ ಅವಾಂತರದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.