ಥರ್ಡ್‌ ಪಾರ್ಟಿ ಮೋಟರ್‌ ವಿಮೆ ಹಾಗೂ ಗ್ರೂಪ್‌ ಹೆಲ್ತ್‌ ಇನ್ಶೂರೆನ್ಸ್‌ ಯೋಜನೆಗಳ ಪ್ರೀಮಿಯಂ ಏ.1ರಿಂದಲೇ ಹೆಚ್ಚಾಗಬಹುದು. ಏ.1ರಿಂದ ದೇಶೀಯ ಸಾಮಾನ್ಯ ವಿಮಾ ಮಾರುಕಟ್ಟೆಯಲ್ಲಿ ವಿಮೆಗಳ ನವೀಕರಣ ಪ್ರಕ್ರಿಯೆ ನಡೆಯುತ್ತದೆ
ಮುಂಬೈ(ಮಾ.14): ವಾಹನ ಹಾಗೂ ಆರೋಗ್ಯ ವಿಮಾ ಯೋಜನೆಗಳ ಪ್ರೀಮಿಯಂ ಮೊತ್ತ ಏ.1ರಿಂದ ಅನ್ವಯವಾಗುವಂತೆ ಶೇ.10ರಿಂದ ಶೇ.15ರಷ್ಟು ಹೆಚ್ಚಳವಾಗುವ ಸಂಭವವಿದೆ. ವಿಮಾ ಪರಿಹಾರ ಪಾವತಿ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ಬ್ಯಾಂಕ್ಗಳ ಬಡ್ಡಿ ದರ ಕುಸಿತದಿಂದಾಗಿ ಹೂಡಿಕೆ ಆದಾಯ ಕುಸಿದಿರುವುದರಿಂದ ಚಿಂತೆಗೆ ಒಳಗಾಗಿರುವ ಜೀವ ವಿಮೆಯೇತರ ವಿಮಾ ಸೌಲಭ್ಯ ಒದಗಿಸುವ ಕಂಪನಿಗಳು, ಪ್ರೀಮಿಯಂ ಹೆಚ್ಚಿಸುವ ಕುರಿತು ಗಂಭೀರ ಚಿಂತನೆಯಲ್ಲಿ ಮುಳುಗಿವೆ.
