2014, ಏಪ್ರಿಲ್'ನಿಂದ ಸುಪ್ರೀಂ ಕೋರ್ಟ್'ನ ಭದ್ರತೆ ಉಸ್ತುವಾರಿಯ ತಂಡದಲ್ಲಿದ್ದ ಈತ,

ನವದೆಹಲಿ(ಜ.3): ಸುಪ್ರೀಂ ಕೋರ್ಟ್'ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಂದ್'ಪಾಲ್ ಆತ್ಮಹತ್ಯೆ ಮಾಡಿಕೊಂಡ ಪೇದೆ.ದೆಹಲಿಯ ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ ತನ್ನ ಸರ್ವೀಸ್ ರಿವಾಲ್ವರ್'ನಿಂದ ಜ.2ರಂದು ಬೆಳಿಗ್ಗೆ 8.15 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 2014, ಏಪ್ರಿಲ್'ನಿಂದ ಸುಪ್ರೀಂ ಕೋರ್ಟ್'ನ ಭದ್ರತೆ ಉಸ್ತುವಾರಿಯ ತಂಡದಲ್ಲಿದ್ದ ಈತ, ಈ ವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗಿನ ಪಾಳಿ ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಅಪರಾಧ ವಿಭಾಗ ಹಾಗೂ ವಿಧಿ ವಿಧಾನ ತಜ್ಞರು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯ ಬಗ್ಗೆ ಕಾರಣ ತಿಳಿದು ಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.