ನಲಪಾಡ್‌ ಪ್ರಕರಣ ಹೊರತರುವ ತಾಕತ್ತು ಸರ್ಕಾರಕ್ಕಿಲ್ಲ: ಎಚ್‌ಡಿಕೆ

First Published 24, Feb 2018, 8:06 AM IST
HDK Slams Congress Govt
Highlights

ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಪ್ರಕರಣಕ್ಕೆ ಅಂದು ನಡೆದ ಘಟನೆಯ ಹೊರತಾಗಿ ಬೇರೆಯದೇ ಆದ ಹಿನ್ನೆಲೆಯಿದ್ದು ಅದನ್ನು ಹೊರತರುವ ತಾಕತ್ತು ಈ ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಸಬಾಂಬ್‌ ಸಿಡಿಸಿದ್ದಾರೆ.

ಹೊಳೆನರಸೀಪುರ: ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಪ್ರಕರಣಕ್ಕೆ ಅಂದು ನಡೆದ ಘಟನೆಯ ಹೊರತಾಗಿ ಬೇರೆಯದೇ ಆದ ಹಿನ್ನೆಲೆಯಿದ್ದು ಅದನ್ನು ಹೊರತರುವ ತಾಕತ್ತು ಈ ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಸಬಾಂಬ್‌ ಸಿಡಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಿಲ್ಲ. ಹ್ಯಾರಿಸ್‌ ಪುತ್ರನ ಪ್ರಕರಣದ ಹಿಂದೆ ಬೇರೆಯದೇ ಆದ ಬಲವಾದ ಕಾರಣ ಮತ್ತು ಹಿನ್ನೆಲೆಗಳೂ ಸಾಕಷ್ಟುಇದೆ ಎಂದಷ್ಟೇ ಹೇಳಿದರು. ಇದೇ ವೇಳೆ ಪಕ್ಷದೊಳಗಿನವರ ದಿನಕ್ಕೊಂದು ಪ್ರಕರಣಗಳು ಹೊರಬೀಳುತ್ತಿದ್ದರೂ ಕಾಂಗ್ರೆಸ್‌ ತನ್ನ ವರ್ತನೆ ತಿದ್ದಿಕೊಳ್ಳದೇ ಹೋದಲ್ಲಿ ರಾಜ್ಯದ ಜನರೇ ಆ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದರು.

loader