ಡಿಸಿ ನನ್ನ ಸಂಬಂಧಿಕರಲ್ಲ, ಹಾಸನ ಜಿಲ್ಲೆಗೆ ವಿಶೇಷ ತಂಡ

First Published 11, Apr 2018, 8:01 PM IST
HDD Slams State Government
Highlights

ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಅವರ ಕುಮ್ಮಕ್ಕು ಕಾರಣ ಎಂದು‌ ಕಿಡಿಕಾರಿದರು.ಬಾಗೂರು ಮಂಜೇಗೌಡ ಸಿಎಂ‌ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ‌ಆ ಸ್ಥಾನದ ಗೌರವ ಕಳೆದುಕೊಂಡು‌ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು

ಹಾಸನ(ಏ.11): ಜಿಲ್ಲಾಧಿಕಾರಿ ನನ್ನ ಸಂಬಂಧಿಕರಲ್ಲ ಬೇಕಿದ್ದರೆ ಹಾಸನ ಜಿಲ್ಲೆಗೆ ವಿಶೇಷ ತಂಡ ಕಳುಹಿಸಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯ ಸರ್ಕಾರಕ್ಕೆ ಮನವು ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ, ಚುನಾವಣಾ ಆಯೋಗದ ವಿರುದ್ಧ ಮಾಜಿ ಪ್ರಧಾನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಿದ್ದರಾಮಯ್ಯ ಅಂಡ್ ಟೀಂ ಜಿಲ್ಲೆಯಲ್ಲಿ ಏಳೂ ಸ್ಥಾನ ಗೆಲ್ಲಬೇಕು ಎಂದು ವೀರಾ ವೇಶದ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಅವರ ಕುಮ್ಮಕ್ಕು ಕಾರಣ ಎಂದು‌ ಕಿಡಿಕಾರಿದರು.

ಬಾಗೂರು ಮಂಜೇಗೌಡ ಸಿಎಂ‌ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ‌ಆ ಸ್ಥಾನದ ಗೌರವ ಕಳೆದುಕೊಂಡು‌ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಿಎಂ‌ಗೆ ಚುನಾವಣಾ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ. ಹಾಸನ ಜಿಲ್ಲೆಯಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಬಗ್ಗೆ ಮಾಜಿ ಪ್ರಧಾನಿ ಅನುಮಾನ ವ್ಯಕ್ತಪಡಿಸಿದರು.

ನಾನು‌ ಮುಖ್ಯ ಚುನಾವಣಾ ಆಯುಕ್ತ ರಾವತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಮುಖ್ಯ ಕಾರ್ಯದರ್ಶಿ ಸರಕಾರದ ವಿರುದ್ಧ ಮಾತನಾಡಲ್ಲ. ಏಕೆಂದರೆ ಸಿಎಂ ಅವರಿಗೆ ಲೈಫ್ ಕೊಟ್ಟಿದ್ದಾರೆ. ರಾಜ್ಯದ ಆಡಳಿತ ಯಂತ್ರ ನೀತಿ ಸಂಹಿತೆಗೆ  ಮಾನ್ಯತೆ ಕೊಡದೆ ಕಡತ ವಿಲೇವಾರಿ ಮಾಡುತ್ತಿದೆ. ನಾನು‌ ಮತ್ತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವೆ' ಎಂದು ತಿಳಿಸಿದರು.

loader