ಯಡಿಯೂರಪ್ಪ ಕೂಡಾ ತನಿಖೆ ಮಾಡಿಸಿದ್ದಾರೆ. ನಮ್ಮ ಬಳಿ 200 ಎಕರೆ ಎಲ್ಲಿದೆ ?ಬಿಡದಿಯಲ್ಲಿ ಕುಮಾರಸ್ವಾಮಿಗೆ ಸೇರಿದ 70/80ಎಕರೆ ಇರಬಹುದು ಅಂತಾ ಹೇಳಿದ್ರು.
ಬೆಂಗಳೂರು(ನ.1): ರಾಜ್ಯ ರಾಜಕಾರಣದಲ್ಲಿ ಮತ್ತೇ ಭೂ ಹಗರಣದ ಸದ್ದು ಪ್ರತಿಧ್ವನಿಸಿದೆ. ಎಚ್.ಡಿ. ಕುಮಾರಸ್ವಾಮಿ, ಹಾಗೂ ಸಂಬಂಧಿಗಳ ಮೇಲೆ ಎಸ್.ಆರ್ ಹಿರೇಮಠ್ ಮಾಡಿರೋ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇವತ್ತು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಎಸ್. ಆರ್. ಹಿರೇಮಠ್ ವಿರುದ್ಧ ಕಿಡಿಕಾರಿದರು. ನಮ್ಮ ಕುಟುಂಬವನ್ನು ರಾಜಕೀಯವಾಗಿ ತುಳಿಯುವ ಕೆಲಸ ನಡೆಯುತ್ತಿದೆ ಅಂತಾ ಆರೋಪಿಸಿದರು. ನಾವು ರಾಜಕೀಯ ಹಿನ್ನಲೆಯಿಂದ ಬಂದವರಲ್ಲ, ನನ್ನ ತಂದೆ ರೈತ. ಲೋಕಾಯುಕ್ತ, ಸಿಒಡಿ ಸೇರಿ ಎಲ್ಲ ಸಂಸ್ಥೆಗಳಿಂದಲೂ ತನಿಖೆಯಾಗಿದೆ. ಯಡಿಯೂರಪ್ಪ ಕೂಡಾ ತನಿಖೆ ಮಾಡಿಸಿದ್ದಾರೆ. ನಮ್ಮ ಬಳಿ 200 ಎಕರೆ ಎಲ್ಲಿದೆ ?ಬಿಡದಿಯಲ್ಲಿ ಕುಮಾರಸ್ವಾಮಿಗೆ ಸೇರಿದ 70/80ಎಕರೆ ಇರಬಹುದು ಅಂತಾ ಹೇಳಿದ್ರು.
