ಧರ್ಮಸಿಂಗ್ ಅವರ ರಾಜ್ಯ ರಾಜಕಾರಣದಲ್ಲಿನ ಸುಧೀರ್ಘವಾದ ಪ್ರಯಣದಲ್ಲಿ ಯಾವುದೇ ರೀತಿಯ ಸಮಾಜದ ಬೆಂಬಲ ಇಲ್ಲದಿದ್ದರೂ ಅತ್ಯಂತ ಯಶಸ್ಸು ಕಂಡ ರಾಜಕಾರಣಿ. ಅಜಾತಶತ್ರು ಎಂದು ಅವರನ್ನು ಕರೆಯುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಆ ಪದಕ್ಕೆ ಧರಂಸಿಂಗ್ ಅವರು ಅಕ್ಷರಶಃ ಅನ್ವರ್ಥರಾಗಿದ್ದರು. ನಮ್ಮ ತಂದೆ ದೇವೇಗೌಡರು ಮತ್ತು ಧರ್ಮಸಿಂಗ್ ಅವರ ನಡುವಿನ ಸ್ನೇಹ ಮತ್ತು ಒಡನಾಟ ಸುದೀರ್ಘವಾದದ್ದು. ಪಕ್ಷ ಬೇರೆ ಬೇರೆ ಆಗಿದ್ದರೂ ಅವರಿಬ್ಬರ ಅತ್ಮೀಯತೆಯಲ್ಲಿ ಯಾವತ್ತೂ ಕೊರತೆ ಉಂಟಾಗಲಿಲ್ಲ.
ಬೆಂಗಳೂರು(ಜು.28): ಧರ್ಮಸಿಂಗ್ ಅವರ ರಾಜ್ಯ ರಾಜಕಾರಣದಲ್ಲಿನ ಸುಧೀರ್ಘವಾದ ಪ್ರಯಣದಲ್ಲಿ ಯಾವುದೇ ರೀತಿಯ ಸಮಾಜದ ಬೆಂಬಲ ಇಲ್ಲದಿದ್ದರೂ ಅತ್ಯಂತ ಯಶಸ್ಸು ಕಂಡ ರಾಜಕಾರಣಿ. ಅಜಾತಶತ್ರು ಎಂದು ಅವರನ್ನು ಕರೆಯುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಆ ಪದಕ್ಕೆ ಧರಂಸಿಂಗ್ ಅವರು ಅಕ್ಷರಶಃ ಅನ್ವರ್ಥರಾಗಿದ್ದರು. ನಮ್ಮ ತಂದೆ ದೇವೇಗೌಡರು ಮತ್ತು ಧರ್ಮಸಿಂಗ್ ಅವರ ನಡುವಿನ ಸ್ನೇಹ ಮತ್ತು ಒಡನಾಟ ಸುದೀರ್ಘವಾದದ್ದು. ಪಕ್ಷ ಬೇರೆ ಬೇರೆ ಆಗಿದ್ದರೂ ಅವರಿಬ್ಬರ ಅತ್ಮೀಯತೆಯಲ್ಲಿ ಯಾವತ್ತೂ ಕೊರತೆ ಉಂಟಾಗಲಿಲ್ಲ.
ನನಗೆ ಅವರ ಸಂಪರ್ಕ ಬಂದದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯ ಅವಧಿಯಲ್ಲಿ. ಆ ಸಂದರ್ಭ ನನಗೆ ಅವರನ್ನು ಭೇಟಿ ಮಾಡುವ ಅವಕಾಶ ಬಂತು. ಎಲ್ಲರ ಜೊತೆಯಲ್ಲಿ ಬೆರೆಯುತ್ತಿದ್ದ ರೀತಿ, ಯಾರೇ ವೈರಿಗಳು ಬಂದರೂ ಅವರನ್ನು ನಿರ್ಲಕ್ಷ್ಯ ಮಾಡದೇ ವಿಚಾರಿಸಿಕೊಳ್ಳುವುದು ಮತ್ತು ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದೇ ಇರುವ ಗುಣ ಬೇರೆ ಯಾವ ರಾಜಕಾರಣಿಗಳಲ್ಲೂ ಕಾಣ ಸಿಗುವುದಿಲ್ಲ. ಯಾವತ್ತೂ ಯಾರನ್ನೂ ಮಟ್ಟ ಹಾಕಬೇಕು ಎಂಬ ಸೇಡಿನ ಸ್ವಭಾವ ಅವರಲ್ಲಿ ಇರಲಿಲ್ಲ. ದ್ವೇಷದ ರಾಜಕಾರಣ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡು ಬರಲೇ ಇಲ್ಲ. ಅದು ತುಂಬಾ ಅಪರೂಪವಾದದ್ದು.
ಅನಿವಾರ್ಯವಾದ ಒಂದು ರಾಜಕೀಯ ಬೆಳವಣಿಗೆ ಯಲ್ಲಿ ನಾನು 2006ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಅವರನ್ನು ಪದಚ್ಯುತಗೊಳಿಸಬೇಕಾದ ಸನ್ನಿವೇಶ ನಿರ್ಮಾಣವಾಯಿತು. ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಹಿರಿಯರಾದ ಅವರ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದೆ.
ಆಗ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಏರಿರುವ ನನ್ನ ಬಗ್ಗೆ ಒಂದೇ ಒಂದು ಸಣ್ಣ ಅಸಮಾಧಾನದ ಭಾವನೆಯೂ ಅವರ ಮುಖದಲ್ಲಿ ಕಂಡು ಬರಲಿಲ್ಲ. ಅಷ್ಟರ ಮಟ್ಟಿಗೆ ಉದಾತ್ತ ಮನಸ್ಸಿನ, ವಿಶಾಲ ಹೃದ ಯದ ವ್ಯಕ್ತಿತ್ವ ಉಳ್ಳವರಾಗಿದ್ದರು. ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿ, ಹೆಸರು ಗಳಿಸಿ ಎಂದು ನನಗೆ ಅತ್ಯಂತ ಪ್ರೀತಿಯಿಂದ ಮೈದಡವಿ ಆಶೀರ್ವಾದ ಮಾಡಿದರು.
ಬಹುಶಃ ಆ ಸಂದರ್ಭದಲ್ಲಿ ಅವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಆ ರೀತಿ ಪ್ರೀತಿಯಿಂದ ಕಾಣುತ್ತಿದ್ದರೇ ಎಂಬ ಪ್ರಶ್ನೆ ಅಂದಿನಿಂದಲೂ ನನಗೆ ಬಲವಾಗಿ ಕಾಡತೊಡಗಿದೆ. ಅದು ಈಗ ಮತ್ತಷ್ಟು ಬಲವಾಗಿದೆ.
ಧರ್ಮಸಿಂಗ್ ಅವರು ಕೆಳಹಂತದಿಂದ ರಾಜಕಾರಣ ಆರಂಭಿಸಿ ಮುಖ್ಯಮಂತ್ರಿ ಪದವಿ ವರೆಗೆ ಏರಿದರು. ಆದರೆ, ಯಾವತ್ತೂ ಅವರು ತಮ್ಮ ಸಜ್ಜನ ನಡವಳಿಕೆ, ವಿನಮ್ರ ಭಾವನೆ ಬಿಟ್ಟುಕೊಡಲಿಲ್ಲ. ಇವತ್ತಿನ ಯುವ ರಾಜಕಾರಣಿಗಳಿಗೆ ‘ರ್ಮಸಿಂಗ್ ಅವರ ಈ ನಡವಳಿಕೆ ಯಾವತ್ತೂ ಮಾದರಿಯಾದದ್ದು. ಅವರು ಮುಖ್ಯಮಂತ್ರಿಯಾದ ನಂತರ ಆ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸ ಬೇಕು ಎಂಬ ಸತತ ಪ್ರಯತ್ನ ಅವರ ಪಕ್ಷದವರಿಂದಲೇ ನಡೆದಿದ್ದು ಅವರಿಗೆ ಗೊತ್ತಿತ್ತು. ಆದರೂ ಅವರಿಗೆ ಪಕ್ಷದ ಬಗ್ಗೆ ಇದ್ದ ನಿಷ್ಠೆ ಮಾತ್ರ ಪ್ರಶ್ನಾತೀತವಾಗಿತ್ತು. ನಾನು ಅವರನ್ನು ಪದಚ್ಯುತಗೊಳಿಸಿ ಮುಖ್ಯಮಂತ್ರಿಯಾದ ನಂತರ ಅವರು ಪ್ರತಿಪಕ್ಷದ ನಾಯಕರಾದರು. ಆದರೆ, ಎಂದಿಗೂ ಹಿಂದಿನ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪ್ರಯತ್ನ ಮಾಡಲಿಲ್ಲ.
ಇವತ್ತು ರಾಜಕಾರಣ ಮಾಡಬೇಕು ಎಂದುಕೊಂಡವರು ಅವರು ಬಂದಿರುವ ಹಿನ್ನೆಲೆಯ ರಕ್ಷಣೆ ಪಡೆಯುತ್ತಾರೆ. ಆದರೆ, ಒಂದು ಸಣ್ಣ ಜನಾಂಗದಲ್ಲಿ ಜನಿಸಿ ಯಾವುದೇ ಪ್ರಬಲ ಜಾತಿಯ ಹಿನ್ನೆಲೆ ಇಲ್ಲದಿದ್ದರೂ ಈ ಮಟ್ಟಿಗೆ ಸಾ‘ನೆ ಮಾಡಿದ್ದು ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ‘ರಂಸಿಂಗ್ ಅವರನ್ನು ಬಿಟ್ಟು ಇನ್ನಾರೂ ಇಲ್ಲ ಎಂದೇ ಹೇಳಬಹುದು.
