ಚನ್ನಪಟ್ಟಣದಲ್ಲಿ ಎಚ್‌.ಎಂ.ರೇವಣ್ಣ ಯಾಕೆ? ಬೇಕಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಾದರೂ ಬಂದು ಸ್ಪರ್ಧಿಸಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕೊಪ್ಪಳ : ಚನ್ನಪಟ್ಟಣದಲ್ಲಿ ಎಚ್‌.ಎಂ.ರೇವಣ್ಣ ಯಾಕೆ? ಬೇಕಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಾದರೂ ಬಂದು ಸ್ಪರ್ಧಿಸಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ತಮ್ಮ ವಿರುದ್ಧ ಸಚಿವ ಎಚ್‌.ಎಂ.ರೇವಣ್ಣ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸುತ್ತಿರುವ ಬಗ್ಗೆ ನಗರದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್‌.ಎಂ.ರೇವಣ್ಣ ಅವರು ಮಾಗಡಿ ಕ್ಷೇತ್ರ ಬಿಟ್ಟು 15 ವರ್ಷಗಳು ಆಗಿದ್ದು ಈಗೆಲ್ಲಿ ಸ್ಪರ್ಧಿಸುತ್ತಾರೆ? ರಾಹುಲ್‌ ಅವರಿಗೆ ಸಾಧ್ಯವಿಲ್ಲದಿದ್ದರೆ ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿರುವ ಸಿದ್ದರಾಮಯ್ಯನವರು ಇಲ್ಲಿಗೆ ಬಂದು ಸ್ಪರ್ಧಿಸಲಿ ಎಂದರು.

ಕಾಂಗ್ರೆಸ್‌ ಉದ್ದೇಶ ಕ್ಷೇತ್ರದಲ್ಲಿ ಯೋಗೀಶ್ವರ ಅವರನ್ನು ಕಟ್ಟಿಹಾಕುವುದಲ್ಲ, ಬದಲಾಗಿ ನನ್ನ ಕಟ್ಟಿಹಾಕಲು ಆ ಪಕ್ಷ ಕಸರತ್ತು ನಡೆಸುತ್ತಿದೆ. ಆದರೆ ಗೆಲ್ಲೋದು ಮಾತ್ರ ಜೆಡಿಎಸ್‌ ಎಂದರು.