Asianet Suvarna News Asianet Suvarna News

ಇಸ್ರೇಲ್'ಗೆ ಹೋದಾಗ ಹಾರ್ಟ್ ಅಟ್ಯಾಕ್ ಆಗಿತ್ತು, ತಡವಾಗಿ ವಿಷಯ ಬಹಿರಂಗಪಡಿಸಿದ ಕುಮಾರಸ್ವಾಮಿ

‘ಇತ್ತೀಚೆಗೆ ಇಸ್ರೇಲ್ ಪ್ರವಾಸದ ವೇಳೆಯೇ ಎದೆ ನೋವು ಕಾಣಿಸಿಕೊಂಡಿತ್ತು. ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದಾಗ ಲಘು ಹೃದಯಾಘಾತ ಆಗಿರುವುದನ್ನು ವೈದ್ಯರು ಖಚಿತಪಡಿಸಿದ್ದರು’ ಎಂಬ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಡವಾಗಿ ಬಹಿರಂಗಪಡಿಸಿದ್ದಾರೆ. ‘ಆದರೆ, ಆ ವೇಳೆ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗುವ ಪರಿಸ್ಥಿತಿ ಇಲ್ಲದ ಕಾರಣ ನಾಲ್ಕೈದು ದಿನಗಳವರೆಗೆ ಔಷಧಿ ಪಡೆದು ಬೆಂಗಳೂರಿಗೆ ವಾಪಸ್ ಆದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನನಗೆ ಎರಡನೇ ಜನ್ಮ ನೀಡಿದ್ದಾರೆ’ ಎಂದೂ ಅವರು ಭಾವೋದ್ವೇಗದಿಂದ ನುಡಿದಿದ್ದಾರೆ.

HD Kumaraswamy Reveals the information of his heath

ಬೆಂಗಳೂರು(ಅ.02): ‘ಇತ್ತೀಚೆಗೆ ಇಸ್ರೇಲ್ ಪ್ರವಾಸದ ವೇಳೆಯೇ ಎದೆ ನೋವು ಕಾಣಿಸಿಕೊಂಡಿತ್ತು. ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದಾಗ ಲಘು ಹೃದಯಾಘಾತ ಆಗಿರುವುದನ್ನು ವೈದ್ಯರು ಖಚಿತಪಡಿಸಿದ್ದರು’ ಎಂಬ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಡವಾಗಿ ಬಹಿರಂಗಪಡಿಸಿದ್ದಾರೆ. ‘ಆದರೆ, ಆ ವೇಳೆ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗುವ ಪರಿಸ್ಥಿತಿ ಇಲ್ಲದ ಕಾರಣ ನಾಲ್ಕೈದು ದಿನಗಳವರೆಗೆ ಔಷಧಿ ಪಡೆದು ಬೆಂಗಳೂರಿಗೆ ವಾಪಸ್ ಆದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನನಗೆ ಎರಡನೇ ಜನ್ಮ ನೀಡಿದ್ದಾರೆ’ ಎಂದೂ ಅವರು ಭಾವೋದ್ವೇಗದಿಂದ ನುಡಿದಿದ್ದಾರೆ.

ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ವಾರ ಶಸ್ತ್ರಚಿಕಿತ್ಸೆಗೊಳಗಾದ ಕುಮಾರಸ್ವಾಮಿ ಭಾನುವಾರ ಅದೇ ಆಸ್ಪತ್ರೆಯಲ್ಲಿ ಸುದ್ದಿಗಾರರ ಜತೆ ಚಿಕಿತ್ಸೆ ವಿವರ ಹಂಚಿಕೊಂಡದ್ದು ಹೀಗೆ. ರೈತರು ಉತ್ತಮ ಬೆಳೆ ಬೆಳೆಯುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಇತ್ತೀಚೆಗೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿತು. ಅಲ್ಲಿನ ಆಸ್ಪತ್ರೆಗೆ ತೆರಳಿದಾಗ ಲಘು ಹೃದಯಾಘಾತವಾಗಿರುವ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದರು. ಆದರೆ, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರು ತಮಗೆ ಬಹು ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ವಿಷಯವನ್ನು ಅವರಿಗೆ ತಿಳಿಸಿ, ಡಾ.ಮಂಜುನಾಥ್ ಅವರೊಂದಿಗೂ ಮಾತುಕತೆ ನಡೆಸಿದೆ. ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳುವಂತೆ ಮಂಜುನಾಥ್ ಅವರ ಸಲಹೆ ಮೇರೆಗೆ ಹೈಸಿಟಿಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.

ನಾಲ್ಕೈ ದಿನಗಳವರೆಗೆ ಸಮಸ್ಯೆಯಾಗ ದಂತೆ ಔಷಧಿ ನೀಡುವಂತೆ ಮನವಿ ಮಾಡಿ ಕೊಂಡು ಚಿಕಿತ್ಸೆ ಪಡೆದುಕೊಳ್ಳಲಾಯಿತು ಎಂದು ವಿವರಿಸಿದರು. ನಗರಕ್ಕೆ ವಾಪಸ್ ಆದ ಬಳಿಕ ಜಯದೇವ ಆಸ್ಪತ್ರೆಯಲ್ಲಿ ಪೂರ್ತಿ ಒಂದು ದಿನ ವಿವಿಧ ಪರೀಕ್ಷೆ ನಡೆಸಲಾಯಿತು. ಅಪೊಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸತ್ಯಕಿ ಅಂಬಾಲ ಅವರು ಸಹ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿದರು. ಆದರೆ, ಡಾ.ಸತ್ಯಕಿ ಅವರಿಗೆ ‘ನಿಮ್ಮ ಮೇಲೆ ವಿಶ್ವಾಸ ಇದೆ. ನೀವೇ ಶಸ್ತ್ರಚಿಕಿತ್ಸೆ ನಡೆಸಿ’ ಎಂದು ಮನವಿ ಮಾಡಿದೆ. ಇದಕ್ಕೆ ಒಪ್ಪಿದ ಅವರು, ಯಾವುದೇ ಸಮಸ್ಯೆಯಾಗದಂತೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಭರವಸೆ ನೀಡಿ ದರು. ಡಾ.ಸತ್ಯಕಿ ಮತ್ತವರ ತಂಡದ ಪರಿಶ್ರ ಮದಿಂದ ನನಗೆ ಎರಡನೇ ಜನ್ಮ ಸಿಕ್ಕಿದೆ ಎಂದು ಬಣ್ಣಿಸಿದರು.

ಅಪೊಲೋ ಆಸ್ಪತ್ರೆಯ ವೈದ್ಯರ ತಂಡ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಹೊಂದಿದೆ. ವಿಶ್ವದ ಯಾವುದೇ ತಜ್ಞ ವೈದ್ಯರಿಗೂ ಸರಿಸಾ ಟಿಯುಳ್ಳವರಾಗಿದ್ದಾರೆ. ಅಮೆರಿಕದಲ್ಲಿ ಇಂಥ ಆಧುನಿಕ ಶಸ್ತ್ರಚಿಕಿತ್ಸೆ ಲಭ್ಯವಾಗುತ್ತಿರಲಿಲ್ಲ ಎಂದ ಅವರು, ಒಮ್ಮೆ ಮುಂಬೈಗೆ ತೆರಳಿದ ವೇಳೆಯೂ ಎದೆ ನೋವು ಕಾಣಿಸಿಕೊಂಡಿತು. ರಾಜ್ಯಕ್ಕೆ ವಾಪಸ್ ಬಂದಾಗ ಡಾ. ಮಂಜು ನಾಥ್ ಅವರು ಚಿಕಿತ್ಸೆ ನೀಡಿದ್ದರು. ಆದರೆ, ಸಮಸ್ಯೆ ಏನೆಂಬುದನ್ನು ಹೇಳಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ವೇಳೆ ಅತಿಯಾದ ಓಡಾಟ ದಿಂದ ಹೃದಯ ಸಮಸ್ಯೆ ಕಾಣಿಸಿಕೊಂಡಿತು. ಜನರಿಗೆ ಸೇವೆ ಸಲ್ಲಿಸುವ ವೇಳೆ ತೊಂದರೆ ಯಾಗಬಾರದು ಎಂದು ಯಾವುದೇ ಶಸ್ತ್ರ ಚಿಕಿತ್ಸೆಗೊಳಗಾಗಿರಲಿಲ್ಲ. ನಂತರದ ದಿನದಲ್ಲಿ ವಾಲ್ವ್ ರಿಪ್ಲೇಸ್‌ಮೆಂಟ್ ಮಾಡಿಸಿಕೊಳ್ಳಲಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಡಾ.ಸತ್ಯಕಿ ನಂಬಾಲ ಮಾತನಾಡಿ, ಕುಮಾರಸ್ವಾಮಿ ಅವರ ಆರೋಗ್ಯವು ಶೇ.90 ರಷ್ಟು ಸುಧಾರಣೆ ಕಂಡಿದೆ. ಇನ್ನು ಶೇ.10ರಷ್ಟು ಸುಧಾರಿಸಿದರೆ ಮನೆಗೆ ಹೋಗಬಹುದು. ಎಂದು ಹೇಳಿದರು. 20 ದಿನ ಯಾರೂ ಭೇಟಿ ಮಾಡಬೇಡಿ: ನನ್ನ ವೈಯಕ್ತಿಕ ಜೀವನದಲ್ಲಿ ಕೆಲವೊಂದು ತಪ್ಪು ಗಳಾಗಿವೆ. ಪರಿಣಾಮ ಆರೋಗ್ಯದಲ್ಲಿ ಏರು ಪೇರಾಗಿದೆ. ೨೦ ದಿನಗಳವರೆಗೆ ಅಭಿಮಾನಿಗಳು, ಕಾರ್ಯಕರ್ತರು ಯಾರೂ ಸಹ ತಮ್ಮನ್ನು ಭೇಟಿ ಮಾಡುವ ಪಯತ್ನ ಮಾಡಬಾರದು. ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಖುದ್ದಾಗಿ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರನ್ನು, ಭೇಟಿಯಾಗುತ್ತೇನೆ ಎಂದರು.

 

Follow Us:
Download App:
  • android
  • ios