ದೇವೇಗೌಡರ ಮನೆಯ ಗೇಟ್ ಬದಲಾಯಿಸಲು ನಿರ್ಧಾರ

First Published 3, Apr 2018, 12:06 PM IST
HD Devegowda Home Gate Change
Highlights

ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡರ ಮನೆಯ ಗೇಟ್ ಬದಲಾಯಿಸಲಾಗುತ್ತಿದ್ದು, ವಾಸ್ತು ಶಾಸ್ತ್ರಜ್ಞರ ಸಲಹೆ ಇದಕ್ಕೆ ಕಾರಣವಂತೆ. 

ಬೆಂಗಳೂರು : ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡರ ಮನೆಯ ಗೇಟ್ ಬದಲಾಯಿಸಲಾಗುತ್ತಿದ್ದು, ವಾಸ್ತು ಶಾಸ್ತ್ರಜ್ಞರ ಸಲಹೆ ಇದಕ್ಕೆ ಕಾರಣವಂತೆ. ದೇವೇಗೌಡರ ಪುತ್ರ ರೇವಣ್ಣ ದಿಲ್ಲಿಗೆ ಬಂದಾಗೊಮ್ಮೆ ಮನೆ ಬಾಗಿಲಿನ ಎದುರು ಗೇಟ್ ಇರೋದು ನಮಗೆ ಒಳ್ಳೇದಲ್ಲ.  ಅದನ್ನು ಸ್ವಲ್ಪ ಎಡ ಮೂಲೆಗೆ ಶಿಫ್ಟ್ ಮಾಡಬೇಕು ಎಂದು ತಂದೆಗೆ ಹೇಳುತ್ತಲೇ ಇದ್ದರಂತೆ.

ಆದರೆ ಈಗ ಚುನಾವಣೆ ಇರುವುದರಿಂದ ಗೇಟ್ ಮಾಡಿಸುತ್ತಿರುವ ದೇವೇಗೌಡರು ತಮ್ಮ ಮನೆಯ ದೊಡ್ಡ ಗೇಟ್ ಅನ್ನು ಬಲ ಮೂಲೆಯಿಂದ ಎಡ ಮೂಲೆಗೆ ಶಿಫ್ಟ್ ಮಾಡಿದ್ದಾರೆ.

ರೇವಣ್ಣ ಗೇಟ್ ಶಿಫ್ಟ್ ಮಾಡಿದರೆ ದೆಹಲಿಯಲ್ಲಿ ಮತ್ತೆ ಪವರ್ ಫುಲ್ ಆಗ್ತೇವೆ ಎಂದು ತಂದೆಗೆ ಹೇಳಿದ್ದಾರಂತೆ. ಆದರೆ ದೆಹಲಿಯಲ್ಲಿ ಪ್ರಭಾವ ಬೆಳೆಯಬೇಕಾದರೆ ಕರ್ನಾಟಕದ ಅಧಿಕಾರದಲ್ಲಿ ಪಾಲು ಸಿಗಲೇಬೇಕು.

ಹೀಗಾಗಿ ಚುನಾವಣೆಗೆ ಮೊದಲೇ ಗೇಟ್ ಶಿಫ್ಟ್ ಆಗಿ ತಯಾರಾಗಬೇಕು ಎಂದು ದೇವೇಗೌಡರು ಹೇಳಿ ಹೋಗಿದ್ದಾರೆ. ಅಧಿಕಾರ ಕೂಡ ಮನೆಯ ಗೇಟ್ ಯಾವ ಮೂಲೆಯಲ್ಲಿ ಇದೆ ಎಂದು ನೋಡಿಕೊಂಡೇ ಬರುತ್ತದೆ ಎಂದು ನಂಬುವವರಿಗೆ ಬೇಡ ಎನ್ನಲಾದೀತೇ.

loader