Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಹೊಸ ಟ್ವಿಸ್ಟ್!: ಗೌಡರ ರಣತಂತ್ರ, ಕರ್ನಾಟಕಕ್ಕೆ ಹೊಸ ಸಿಎಂ?

ರಾಜ್ಯ ರಾಜಕಾರಣದಲ್ಲಿ ರೋಚಕ ಟ್ವಿಸ್ಟ್| ಸರ್ಕಾರ ಉಳಿಸಿಕೊಳ್ಳಲು ಹೊಸ ಅಸ್ತ್ರ ತೆಗೆದ ಗೌಡ| ಗೌಡರ ಅಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಸಮ್ಮತಿ| ಗೌಡರ ಪ್ಲಾನ್ ಅನುಷ್ಠಾನಕ್ಕೆ ಸಂವಿಧಾನಿಕ ಮಾರ್ಗ ಹುಡುಕಾಟ| ದೇವೇಗೌಡ ಮಾಸ್ಟರ್ ಸ್ಟ್ರೋಕ್ಗೆ ಅತೃಪ್ತರು ಏನ್ಮಾಡ್ತಾರೆ...?| ಸಿಎಂ ಬದಲಿಸಿದರೆ ಸರ್ಕಾರ ಉಳಿಸಬಹುದು ಎಂದು ಚರ್ಚೆ 

HD Deve Gowda Master Stroke Mallikarjun Kharge May Become The CM  Of Karnataka
Author
Bangalore, First Published Jul 7, 2019, 9:20 AM IST

ಬೆಂಗಳೂರು[ಜು.07]: ಶಾಸಕರ ರಾಜೀನಾಮೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯಲಾರಂಭಿಸಿವೆ ಒಂದೆಡೆ ಬಿಜೆಪಿ ಸರ್ಕಾರ ರಚಿಸಲು ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪತನಗೊಳ್ಳುವ ಭೀತಿ ಯಲ್ಲಿರುವ ದೋಸ್ತಿ ಸರ್ಕಾರವನ್ನು ಉಳಿಸಲು ನಾನಾ ಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಸಿಎಂ ಕುಮಾರಸ್ವಾಮಿ ಸಿಎಂ ಸ್ಥಾನವನ್ನು ಸಿದ್ದರಾಮಯ್ಯಗೆ ಬಿಟ್ಟುಕೊಡಬೇಕು ಎಂಬ ಕೂಗು ಕೂಡಾ ಕೇಳಿ ಬಂದಿತ್ತು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕರ್ನಾಟಕಕ್ಕೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹೊರತುಪಡಿಸಿ, ನೂತನ ಸಿಎಂ ಸಿಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.

ಹೌದು ಸಂಕಟದಲ್ಲಿರುವ ದೋಸ್ತಿ ಸರ್ಕಾರವನ್ನು ಉಳಿಸಲು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಎಂಬ ಕೂಗು ಕೇಳಿ ಬಂದಿದೆ. ಹೀಗಿರುವಾಗ ದೇವೇಗೌಡರು ತಮ್ಮ ದಾಳ ಉರುಳಿಸಿದ್ದು, ಅತೃಪ್ತರ ಬಾಯಿ ಮುಚ್ಚಿಸುವ ರಣತಂತ್ರ ಹೆಣೆದಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ತಯಾರಿಲ್ಲದ ಗೌಡರು, ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಆಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತುಕತೆ ನಡೆಸಿದ್ದಾರೆ. 

ಗೌಡರ ಈ ಅಸ್ತ್ರ ಫಲ ಕೊಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದು, ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಸಮ್ಮತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಗೌಡರ ಪ್ಲಾನ್ ಅನುಷ್ಠಾನಕ್ಕೆ ಸಂವಿಧಾನಿಕ ಮಾರ್ಗ ಹುಡುಕಾಟವೂ ಈಗಾಗಲೇ ಆರಂಭವಾಗಿದೆ. ಗೌಡರ ಈ ಪ್ಲಾನ್ ಅನುಷ್ಟಾನಕ್ಕೆ ಬಂದಲ್ಲಿ ಖರ್ಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಅತ್ತ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರೇಸ್ ನಿಂದ ಹೊರ ಬೀಳಲಿದ್ದಾರೆ. 

ಸದ್ಯ ಗೌಡರ ಈ ಆಟ ಯಶಸ್ವಿಯಾಗುತ್ತಾ? ಅತೃಪ್ತರು ಏನಂತಾರೆ? ಎಂಬುವುದೇ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios