ಅಂತರ್ ಧರ್ಮೀಯ ದಂಪತಿ ಮಗುವಿಗೆ ಹೆಸರಿಟ್ಟ ಕೇರಳ ಹೈ ಕೋರ್ಟ್

HC names child as inter-faith parents
Highlights

ಅಂತರ್ ಧರ್ಮೀಯ ದಂಪತಿ ತಮ್ಮ ಮಗುವಿಗೆ ಹೆಸರು ಇಡುವ ವಿಚಾರದಲ್ಲಿ ಜಗಳಾಡಿಕೊಂಡಿದ್ದು, ಕೊನೆಗೆ ನ್ಯಾಯಾಧೀಶರೇ ಮಗುವಿಗೆ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥಪಡಿಸಿದ ಅಪರೂಪದ ಪ್ರಸಂಗ ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ. 

ನವದೆಹಲಿ: ಅಂತರ್ ಧರ್ಮೀಯ ದಂಪತಿ ತಮ್ಮ ಮಗುವಿಗೆ ಹೆಸರು ಇಡುವ ವಿಚಾರದಲ್ಲಿ ಜಗಳಾಡಿಕೊಂಡಿದ್ದು, ಕೊನೆಗೆ ನ್ಯಾಯಾಧೀಶರೇ ಮಗುವಿಗೆ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥಪಡಿಸಿದ ಅಪರೂಪದ ಪ್ರಸಂಗ ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ. 

ಹಿಂದು ಮತ್ತು ಕ್ರೈಸ್ತ ಧರ್ಮದ ದಂಪತಿ ಮಧ್ಯೆ ತಮ್ಮ ಎರಡನೇ ಮಗುವಿಗೆ ಹೆಸರು ನೀಡುವ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು. 

ಮಗುವಿಗೆ ಹೆಸರು ಇಡಲು ದಂಪತಿ ಒಮ್ಮತಕ್ಕೆ ಬರದೇ ಇದ್ದ ಕಾರಣಕ್ಕೆ ನಗರಪಾಲಿಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಕೊನೆಗೆ ಕೇಸು ಹೈಕೋರ್ಟ್ ಮೆಟ್ಟಿಲೇರಿತ್ತು. ಮಗುವಿಗೆ ಜಾನ್ ಮಣಿ ಸಚಿನ್ ಎಂಬ ಹೆಸರಿಡಬೇಕು ಎಂಬುದು
ತಾಯಿಯ ಇಚ್ಛೆಯಾಗಿದ್ದರೆ, ಅಭಿನವ್ ಸಚಿನ್ ಎಂದು ಹೆಸರಿಡಬೇಕು ಎಂದು ತಂದೆಯ ಬೇಡಿಕೆಯಾಗಿತ್ತು. 

ಇಬ್ಬರ ಹೆಸರನ್ನು ಪರಿಗಣಿಸಿದ ನ್ಯಾಯಾಧೀಶರು ಮಗುವಿಗೆ ‘ಜಾನ್ ಸಚಿನ್’ ಎಂಬ ಹೆಸರನ್ನು ಸೂಚಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

loader