ಭಾನುವಾರ ಬೆಳಗ್ಗೆ ಕಾರಾಗೃಹದಿಂದ ಇತರೆ 6 ಮಂದಿ ಕೈದಿಗಳ ಜತೆ ತಪ್ಪಿಸಿಕೊಂಡಿದ್ದ ಮಿಂಟೂನನ್ನು ದೆಹಲಿಯಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನವದೆಹಲಿ(ನ.29): ಪಂಜಾಬ್‌ನ ಬಿಗಿ ಭದ್ರತೆಯ ನಭಾ ಕಾರಾಗೃಹದಲ್ಲಿದ್ದ ವೇಳೆ ಖಲಿಸ್ತಾನ ವಿಮೋಚನಾ ಪಡೆ(ಕೆಎಲ್‌ಎಫ್)ಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಪಾಕಿಸ್ತಾನದಲ್ಲಿರುವ ಕೆಲ ವ್ಯಕ್ತಿಗಳಿಗೆ ಹಲವು ಬಾರಿ ಕರೆ ಮಾಡಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಖಲಿಸ್ತಾನ ಚಳವಳಿಗೆ ಸಹಾಯ ಕೋರುವ ಮತ್ತು ಕೆಲ ಪಾಕಿಸ್ತಾನ ಗೂಡಾಚರ್ಯೆ ಸಂಸ್ಥೆ ಐಎಸ್‌ಐ ನಿರ್ವಾಹಕರಿಗೆ ಮಿಂಟೂ ಕರೆ ಮಾಡಿ ಸಮಾಲೋಚನೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಕೆಎಲ್‌ಎಫ್ ಉಗ್ರ ಮಿಂಟೂನನ್ನು ಜಂಟಿ ತನಿಖೆಗೆ ಒಳಪಡಿಸಲಾಗಿದೆ.
ಭಾನುವಾರ ಬೆಳಗ್ಗೆ ಕಾರಾಗೃಹದಿಂದ ಇತರೆ 6 ಮಂದಿ ಕೈದಿಗಳ ಜತೆ ತಪ್ಪಿಸಿಕೊಂಡಿದ್ದ ಮಿಂಟೂನನ್ನು ದೆಹಲಿಯಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.