ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬ ಸಮೇತ ಇಂದು ಶೃಂಗೇರಿಗೆ ಆಗಮಿಸಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಜೊತೆಯಲ್ಲಿ ಶೃಂಗೇರಿಗೆ ಆಗಮಿಸಿದ್ದಾರೆ.  

ಚಿಕ್ಕಮಗಳೂರು (ಜ.01): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬ ಸಮೇತ ಇಂದು ಶೃಂಗೇರಿಗೆ ಆಗಮಿಸಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಜೊತೆಯಲ್ಲಿ ಶೃಂಗೇರಿಗೆ ಆಗಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ಭೇಟಿ ಮಾಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ನಾಳೆಯಿಂದ ಶ್ರೀ ಮಠದ 150 ಪುರೋಹಿತರ ನೇತೃತ್ವದಲ್ಲಿ ಅತಿರುದ್ರ ಮಹಾಯಾಗ 12 ದಿನ ನಡೆಯಲಿದೆ. ಜನವರಿ 14 ರಂದು ಮಹಾಯಾಗ ಪೂರ್ಣಾಹುತಿಯಾಗಲಿದೆ.

ಕುಟುಂಬ ಹಿತದೃಷ್ಟಿಯಿಂದ ನಡೆಯಲಿರುವ ಅತಿ ರುದ್ರಮಹಾ ಯಾಗದಲ್ಲಿ ಜನವರಿ 14 ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪೂರ್ಣಾಹುತಿಯಲ್ಲಿ ಭಾಗಯಾಗಿದ್ದಾರೆ.