ಹೈದರಾಬಾದ್(ಅ.11): ಒಲಿಂಪಿಕ್ಸ್ ಜಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಸಾಧನೆ ಮಾಡಿದ ದೀಪಾ ಅವರು ತಮಗೆ ಬಂದಿದ್ದ ಐಷಾರಾಮಿ ಕಾರು ಉಡುಗೊರೆಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ದೀಪಾ ಅವರ ಸಾಧನೆಗೆ ಮೆಚ್ಚಿ ಹೈದರಾಬಾದಿನ ಬಾಡ್ಮಿಂಟನ್ ಅಸೋಸಿಯೇಷನ್​ನ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರನ್ನು ಉಡಗೊರೆಯಾಗಿ ನೀಡಿದ್ದರು. 

ಚಾಮುಂಡೇಶ್ವರನಾಥ್ ಅವರ ಅಪ್ತ ಮಿತ್ರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ದೀಪಾ ಅವರಿಗೆ ಕಾರಿನ ಕೀ ನೀಡಿದ್ದರು. 

ದೀಪಾ ಅವರ ಆಪ್ತ ವರ್ಗದವರ ಪ್ರಕಾರ, ದೀಪಾ ಅವರಿಗೆ ಈ ಐಷಾರಾಮಿ ಕಾರನ್ನು ನಿಭಾಯಿಸಲು ಕಷ್ಟವಾಗುತ್ತಿದೆಯಂತೆ. ಅಗರ್ತಲಾದಂಥ ಸಣ್ಣ ನಗರದಲ್ಲಿ ಇಂಥ ಕಾರನ್ನು ಇಟ್ಟುಕೊಂಡು ನಿಭಾಯಿಸುವುದು ಕಷ್ಟ ಎಂದಿದ್ದಾರೆ.