Asianet Suvarna News Asianet Suvarna News

ಡೆಂಗ್ಯೂ ಚಿಕಿತ್ಸೆಗೆ 16 ಲಕ್ಷ ರು. ಬಿಲ್ ಮಾಡಿದ ಆಸ್ಪತ್ರೆ

ಡೆಂಗ್ಯೂ ಚಿಕಿತ್ಸೆಗೆ ಗುರುಗ್ರಾಮ ಮೂಲದ ಆಸ್ಪತ್ರೆಯೊಂದು 16 ಲಕ್ಷ ರು. ಬಿಲ್ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

Gurugram Medanta Hospital charges Rs 16 lakh for childs dengue treatment

ಗುರುಗ್ರಾಮ (ಡಿ.24): ಡೆಂಗ್ಯೂ ಚಿಕಿತ್ಸೆಗೆ ಗುರುಗ್ರಾಮ ಮೂಲದ ಆಸ್ಪತ್ರೆಯೊಂದು 16 ಲಕ್ಷ ರು. ಬಿಲ್ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಇಲ್ಲಿನ ಮೇದಾಂತ ಆಸ್ಪತ್ರೆಯಲ್ಲಿ ಕಳೆದ  21 ದಿನಗಳಿಂದ 8 ವರ್ಷದ ಬಾಲಕನಿಗೆ ಡೆಂಗ್ಯೂಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ. ಆದರೂ ಕೂಡ ಆಸ್ಪತ್ರೆಯು 16 ಲಕ್ಷ ಬಿಲ್ ಕಟ್ಟುವಂತೆ ಸೂಚನೆ ನೀಡಿದ್ದು, ಬಾಲಕನ ಪೋಷಕರು ಕಂಗಾಲಾಗಿದ್ದಾರೆ.

ಇತ್ತ ಮಗುವು ಇಲ್ಲ ಹಣವು ಇಲ್ಲದಂತಹ ಸ್ಥಿತಿ ಅವರಿಗೆ ಬಂದೊದಗಿದೆ. ಚಿಕಿತ್ಸೆಯ ನೆಪದಲ್ಲಿ ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆದರೆ ಇದೀಗ  ಘಟನೆ ಬೆಳಕಿಗೆ ಬಂದ ತಕ್ಷಣ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಗುರುಗ್ರಾಮದ ಪೊಲೀಸ್ ಪಿಆರ್’ಒ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಕೂಡ ಫೊರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ  ಬಾಲಕಿಗೆ 16 ಲಕ್ಷ ರು. ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಸೂಚಿಸಲಾಗಿತ್ತು.

Follow Us:
Download App:
  • android
  • ios