ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಹೀರಾನಗರದಲ್ಲಿ ಅಕ್ಟೋಬರ್ 20ರ ನುಸುಕಿನಲ್ಲಿ ನಡೆದ ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗುರ್ನಾಮ್ ಸಿಂಗ್ ಅವರ ತಲೆಗೆ ಗುಂಡೇಟು ಬಿದ್ದಿತ್ತು.

ಜಮ್ಮು(ಅ.23): ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಗುರ್ನಾಮ್ ಸಿಂಗ್ ವೀರ ಮರಣವೊಪ್ಪಿದ್ದಾರೆ.

ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಹೀರಾನಗರದಲ್ಲಿ ಅಕ್ಟೋಬರ್ 20ರ ನುಸುಕಿನಲ್ಲಿ ನಡೆದ ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗುರ್ನಾಮ್ ಸಿಂಗ್ ಅವರ ತಲೆಗೆ ಗುಂಡೇಟು ಬಿದ್ದಿತ್ತು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗುರ್ನಾಮ್ ಸಿಂಗ್ ಅವ್ರನ್ನು ಚಿಕಿತ್ಸೆಗಾಗಿ ವಿದೇಶಿ ವೈದ್ಯರ ತಂಡವನ್ನ ಕರೆಸಿಕೊಳ್ಳುವ ಚಿಂತೆನೆ ಮಾಡಲಾಗ್ತಿತ್ತು. ಆದರೆ, ಅಷ್ಟರೊಳಗೆ ವೀರ ಯೋಧ ಮೃತಪಟ್ಟಿದ್ದಾರೆ.