ವಿವಾದಾತ್ಮಕ ಬಾಬಾನಿಗೆ 3.6 ದಶಲಕ್ಷ ಟ್ವಿಟ್ಟರ್ ಹಿಂಬಾಲಕರು ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ 7.5 ಲಕ್ಷ ಲೈಕ್‌ಗಳಿವೆ.
ನವದೆಹಲಿ(ಸೆ.02): ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಸೇರಿರುವ ಡೇರಾ ಸಚ್ಚಾ ಸೌದ ಸಂಘಟನೆಯ ಮುಖ್ಯಸ್ಥ ರಾಮ್ ರಹೀಂ ಸಿಂಗ್'ನ ಟ್ವಿಟ್ಟರ್ ಹಾಗೂ ಫೇ'ಸ್'ಬುಕ್ ಖಾತೆಗಳನ್ನು ರದ್ದು ಮಾಡಲಾಗಿದೆ.
ಟ್ವಿಟರ್ ಖಾತೆಯನ್ನು ರದ್ದು ಮಾಡಿದ್ದರೆ, ಫೇಸ್'ಬುಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಈತನ ಬೆಂಬಲಿಗರು ಟ್ವೀಟ್'ಗಳನ್ನು ನೋಡದಿರಲೆಂದು ಈ ಕ್ರಮ ಕೈಗೊಳ್ಳಲಾಗಿದೆ. ಇದು ಭಾರತಕ್ಕೆ ಮಾತ್ರ ಅನ್ವಯವಾಗಲಿದ್ದು, ವಿದೇಶಕ್ಕೆ ಅನ್ವಯವಾಗುವುದಿಲ್ಲ. ವಿವಾದಾತ್ಮಕ ಬಾಬಾನಿಗೆ 3.6 ದಶಲಕ್ಷ ಟ್ವಿಟ್ಟರ್ ಹಿಂಬಾಲಕರು ಹಾಗೂ ಫೇಸ್ಬುಕ್ ಪೇಜ್ನಲ್ಲಿ 7.5 ಲಕ್ಷ ಲೈಕ್ಗಳಿವೆ. ಈತನ ಹೆಸರಿನಲ್ಲಿರುವ ಉಳಿದ ಜಾಲತಾಣಗಳು ಶೀಘ್ರದಲ್ಲೇ ಬ್ಲಾಕ್ ಆಗಲಿದೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.
