'ತಾನು 1990ರಿಂದ ನನಗೆ ಪುರುಷತ್ವವಿಲ್ಲ, ಅಲ್ಲದೆ ನಾನು ಯಾರೊಂದಿಗೂ ಸೆಕ್ಸ್ ಮಾಡಲು ಯೋಗ್ಯನಲ್ಲ' ಎಂದು ಹೇಳಿದ್ದ'.

ನವದೆಹಲಿ(ಆ.31): ಅತ್ಯಾಚಾರದ ಆರೋಪದಿಂದ 20 ವರ್ಷ ಜೈಲು ಶಿಕ್ಷೆ ಒಳಗಾಗಿರುವ ಡೇರಾ ಸಚ್ಚಾ ಸೌದ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ಸಿಬಿಐ ವಿಚಾರಣೆ ನಡೆಸಿದ ವೇಳೆ 1990ರಿಂದ ನನಗೆ ಗಂಡಸುತನವಿಲ್ಲ ಎಂದು ಹೇಳಿಕೆ ನೀಡಿದ್ದ ಎಂಬ ಅಂಶ ಬಯಲಾಗಿದೆ.

ಸಿಬಿಐ ನ್ಯಾಯಾಧೀಶರಾದ ಜಗದೀಪ್ ಕುಮಾರ್ ಸಿಂಗ್ ಮುಂದೆ ಇಬ್ಬರು ಸಾದ್ವಿಯರ ಮೇಲೆ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ 'ತಾನು 1990ರಿಂದ ನನಗೆ ಪುರುಷತ್ವವಿಲ್ಲ, ಅಲ್ಲದೆ ನಾನು ಯಾರೊಂದಿಗೂ ಸೆಕ್ಸ್ ಮಾಡಲು ಯೋಗ್ಯನಲ್ಲ' ಎಂದು ಹೇಳಿದ್ದ'. ಸಾಕ್ಷಿದಾರರಿಂದ ಹೇಳಿಕೆ ಪಡೆದುಕೊಂಡಿದ್ದ ನ್ಯಾಯಾಧೀಶರು ರಹೀಮನಿಗೆ ಇಬ್ಬರು ಮಕ್ಕಳಿರುವ ಬಗ್ಗೆ ಮರು ಉತ್ತರ ನೀಡಿ ಬಾಬಾನ ಸುಳ್ಳನ್ನು ಅಳಿಸಿಹಾಕಿದ್ದರು.