ಪೊಲೀಸನೊಬ್ಬನಿಗೆ ಇರಿದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಸಂಸತ್ತಿನ ಕೆಳಮನೆಯ ನಾಯಕರೊಬ್ಬರು ತಿಳಿಸಿದ್ದಾರೆ.
ಲಂಡನ್(ಮಾ.22): ಇಬ್ಬರು ಅಪರಿಚಿತರು ಇಂಗ್ಲೆಂಡಿನ ಸಂಸತ್ತಿನ ಬಳಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಪೊಲೀಸನೊಬ್ಬನಿಗೆ ಇರಿದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಸಂಸತ್ತಿನ ಕೆಳಮನೆಯ ನಾಯಕರೊಬ್ಬರು ತಿಳಿಸಿದ್ದಾರೆ. ಲಂಡನಿನ ವೆಸ್ಟ್'ಮಿನಿಸ್ಟರ್ ಸೇತುವೆ ಬಳಿ ಈ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಸಂಸತ್ ಭವನದ ಒಳಗೆ 400ಕ್ಕೂ ಹೆಚ್ಚು ಸಂಸದರಿದ್ದು, ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.
ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ದುಷ್ಕರ್ಮಿಗಳು ಸಂಸತ್ ಆವರಣದೊಳಗೆ ದುಷ್ಕರ್ಮಿಗಳು ಕಾರು ನುಗ್ಗಿಸಲು ಯತ್ನಿಸಿದ್ದಾರೆ. ಈ ವೇಳೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ್ದಾರೆ. ಗುಂಡಿನ ದಾಳಿ ಹಿನ್ನೆಲೆ ಸಂಸತ್ ಭವನ ಮುಚ್ಚಲಾಗಿದ್ದು ಸಂಸತ್ ಬಳಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.
ಘಟನೆಯ ನಂತರ ಬ್ರಿಟನ್'ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ಸೇರಿದಂತೆ ಸಂಸದರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರ ಸಜ್ಜಿತ ಪೊಲೀಸರ ತಂಡ ಸಂಸತ್ ಪ್ರವೇಶಿಸಿದ್ದು, ಉಗ್ರರ ದಾಳಿ ಎಂದು ಬ್ರಿಟನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
