ಬೆಂಗಳೂರು ಜೈಲಲ್ಲಿ ಗನ್ ಕೇಕ್ ಕತ್ತರಿಸಿ ಹುಟ್ಟುಹಬ್ಬ

ಬೆಂಗಳೂರು(ಜು.17): ಡಿಐಜಿ ರೂಪಾ ಅವರು ಜೈಲು ಅಕ್ರಮ ಬಯಲಿಗೆ ಎಳೆದ ಬೆನ್ನಲ್ಲೇ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳು ಒಂದೊಂದೇ ಬೆಳಕಿಗೆ ಬರತೊಡಗಿವೆ. ಆರು ತಿಂಗಳ ಹಿಂದೆ ವಿಚಾರಣಾಧೀನ ಕೈದಿ ಶ್ರೀನಿವಾಸ್ ಎಂಬಾತ ತನ್ನ ಸಹಚರರು ಮತ್ತು ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಸುಬ್ರಹ್ಮಣ್ಯಪುರ ರೌಡಿಶೀಟರ್ ಆಗಿರುವ ಶ್ರೀನಿವಾಸ್ ಕೊಲೆ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಈತ ರಾಜಕೀಯವಾಗಿ ಸ್ಥಳೀಯವಾಗಿ ಗುರುತಿಸಿಕೊಂಡಿದ್ದ. ಈತನ 10ಕ್ಕೂ ಹೆಚ್ಚು ಸಹಚರರು ಜೈಲಿಗೆ ಗನ್ ಮಾದರಿಯ ಕೇಕ್ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಶ್ರೀನಿವಾಸ್‌ನ ಬಳಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮ ಆಚರಿಸಿದ್ದರು ಎನ್ನಲಾಗಿದೆ.