Asianet Suvarna News Asianet Suvarna News

ಹೆಣ್ಣುಮಗು ಶಾಲೆಗೆ ಸೇರಿದರೆ ಸರ್ಕಾರ ಹಣ ಕೊಡುತ್ತೆ!

ಹೆಣ್ಣುಮಗು ಶಾಲೆಗೆ ಸೇರಿದರೆ ಸರ್ಕಾರ ಹಣ ಕೊಡುತ್ತೆ!| ವಹಲೆ ಧೀಕರಿ ಎಂಬ ಯೋಜನೆಯಡಿಯಲ್ಲಿ ಸಹಾಯಧನ

Gujarat Beti Bachao budget Rs 4000 for each Class 1 girl student Rs 1 lakh when she turns 18
Author
Bangalore, First Published Jul 4, 2019, 9:22 AM IST

ಅಹಮದಾಬಾದ್‌[ಜು.04]: ಹೆಣ್ಣು ಮಗುವಿನ ಜನನ ಪ್ರಮಾಣ ಹೆಚ್ಚಳಕ್ಕಾಗಿ ಗುಜರಾತ್‌ ಸರ್ಕಾರ ನೂತನ ಹೆಜ್ಜೆ ಇಟ್ಟಿದೆ. ವಹಲೆ ಧೀಕರಿ ಎಂಬ ಯೋಜನೆಯಲ್ಲಿ ಕುಟುಂಬವೊಂದರಲ್ಲಿ ಹುಟ್ಟಿದ ಮೊದಲ ಮತ್ತು ಎರಡನೇ ಹೆಣ್ಣು ಮಗು ಶಾಲೆಗೆ ಸೇರಿದ ಕೂಡಲೇ 4 ಸಾವಿರ ಮತ್ತು 9 ನೇ ತರಗತಿಗೆ ಪ್ರವೇಶ ಪಡೆದರೆ 6 ಸಾವಿರ ರು. ಸಹಾಯಧನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದೆ.

ಈ ಯೋಜನೆಯಲ್ಲಿ ಫಲಾನುಭವಿಯಾದ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ 1 ಲಕ್ಷ ರು. ನೆರವು ನೀಡಲಾಗುವುದು. ಇದನ್ನು ಆ ಮಗುವಿನ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆ ಖರ್ಚಿಗೆ ಬಳಸಬಹುದು.

2 ಲಕ್ಷ ರು. ವಾರ್ಷಿಕ ಆದಾಯ ಹೊಂದಿದ ಕುಟುಂಬ ಈ ಯೋಜನೆ ಲಾಭ ಪಡೆಯಲಿದೆ. ಯೋಜನೆ ಜಾರಿಗಾಗಿ ಸರ್ಕಾರ 133 ಕೋಟಿ ರು. ಬಜೆಟ್‌ನಲ್ಲಿ ಮೀಸಲಿಟ್ಟಿದೆ.

Follow Us:
Download App:
  • android
  • ios