ಈ ಬೆಕ್ಕು ಯಾವ ಸೆಲೆಬ್ರಿಟಿಗಳಿಗೆ ಕಡಿಮೆ ಇಲ್ಲ.  ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ಗ್ರ್ಯಾಂಪಿ ಕ್ಯಾಟ್ ಸಾವನ್ನಪ್ಪಿದೆ. 

ಇಂಟರ್ ನೆಟ್ ನಲ್ಲಿ ಈ ಬೆಕ್ಕಿಗೂ ಒಂದು ಸ್ಟಾರ್ ಪಟ್ಟ ಇತ್ತು. ಆದರೆ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಬೆಕ್ಕು ಅಸುನೀಗಿದೆ.ತನ್ನ ವಿಶಿಷ್ಟ ಹಾವ-ಭಾವಗಳಿಂದಲೇ ಫೇಮಸ್ ಆದ ಬೆಕ್ಕಿಗೆ ಅಸಂಖ್ಯ ಅಭಿಮಾನಿಗಳಿದ್ದರು. ಬೆಕ್ಕಿನ ನಿಜವಾದ ಹೆಸರು ತಾರ್ದಾರ್ ಸಾಕ್ಯೂ 2012 ರಲ್ಲಿ ಬೆಕ್ಕಿನ ಚಿತ್ರವೊಂದು ಇಡೀ ಪ್ರಪಂಚದಾದ್ಯಂತ ವೈರಲ್ ಆದಾಗ ಬೆಕ್ಕಿಗೆ ಕೇವಲ 5 ತಿಂಗಳು.

ಇದಾದ ಮೇಲೆ ಈ ಬೆಕ್ಕು ಸೋಶಿಯಲ್ ಮೀಡಿಯಾದಲ್ಲಿ ಒಂದು ಮೆಮೆಯಾಗಿಯೇ ರೂಪುಗೊಂಡಿತು. ಬೆಕ್ಕಿನ ನಿಧನಕ್ಕೆ ಇಡೀ ಸೋಶಿಯಲ್ ಮೀಡಿಯಾ ಕಂಬನಿ ಮಿಡಿದಿದೆ. ಬೆಕ್ಕಿಗೆ 9 ವರ್ಷ ವಯಸ್ಸಾಗಿತ್ತು.

Scroll to load tweet…
Scroll to load tweet…
Scroll to load tweet…
Scroll to load tweet…