ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಊಸರವಳ್ಳಿ ಇದ್ದಂತೆ. ರಾಜಕೀಯ ಲಾಭಕ್ಕಾಗಿ ಆಗಾಗ ಬಣ್ಣ ಬದಲಾಯಿಸುತ್ತಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವ್ಯಂಗ್ಯವಾಡಿದರು.
ಬೆಂಗಳೂರು(ನ.09): ತಮ್ಮನ್ನು ಬಿಜೆಪಿಗೆ ಆಹ್ವಾನಿಸುವುದಾಗಿ ಇತ್ತೀಚೆಗೆ ಬಿಜೆಪಿ ನಾಯಕ ಸಿ.ಟಿ.ರವಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ‘ನನ್ನ ರಕ್ತ,ನರನಾಡಿಗಳಲ್ಲಷ್ಟೇ ಅಲ್ಲ, ನನ್ನ ವಂಶವಾಹಿಯಲ್ಲೂ ಕಾಂಗ್ರೆಸ್ ಇದೆ. ನನ್ನ ಬಗ್ಗೆ ಮಾತಾಡುವಾಗ ಹುಷಾರಾಗಿರಿ’ ಎಂದು ಎಚ್ಚರಿಸಿದ್ದಾರೆ.
ನೋಟ್‌ಬ್ಯಾನ್ ವರ್ಷಾಚರಣೆ ಕರಾಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಮಾತನಾಡುವಾಗ ಬಿಜೆಪಿಯವರು ಹುಷಾರಾಗಿ ಮಾತನಾಡಬೇಕು. ಸಿ.ಟಿ.ರವಿ ಅವರನ್ನು ನಾನಂತೂ ಕಾಂಗ್ರೆಸ್‌ಗೆ ಕರೆಯೋದಿಲ್ಲ. ಅವರು ಅಲ್ಲೇ(ಬಿಜೆಪಿ) ಇದ್ದು, ಅಲ್ಲೇ ಸಾಯಲಿ’ ಎಂದರು.

ಬಿಎಸ್‌ವೈ ಊಸರವಳ್ಳಿ ಇದ್ದಂತೆ: ತಿಮ್ಮಾಪುರ
ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಊಸರವಳ್ಳಿ ಇದ್ದಂತೆ. ರಾಜಕೀಯ ಲಾಭಕ್ಕಾಗಿ ಆಗಾಗ ಬಣ್ಣ ಬದಲಾಯಿಸುತ್ತಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವ್ಯಂಗ್ಯವಾಡಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿಯಲ್ಲಿದ್ದಾಗ ಟಿಪ್ಪು ವೇಷ ಹಾಕಿ, ಖಡ್ಗ ಹಿಡಿದು ಪೋಸ್ ಕೊಟ್ಟಿದ್ದಲ್ಲದೆ, ಟಿಪ್ಪು ಜಯಂತಿ ಆಚರಣೆಗೆ ಅಸ್ತು ಎಂದಿದ್ದರು. ಈಗ ಬಿಜೆಪಿಯಲ್ಲಿರುವ ಕಾರಣಕ್ಕೆ ಟಿಪ್ಪು ಜಯಂತಿ ಬೇಡ ಎನ್ನುತ್ತಿದ್ದಾರೆ. ಇದೇ ಅವರ ಊಸರವಳ್ಳಿ ವರ್ತನೆಗೆ ಜೀವಂತ ಸಾಕ್ಷಿ ಎಂದು ಕಿಡಿಕಾರಿದರು.
