ಸದ್ಯ ಡಿಕೆಶಿ ಮೇಲೆ ಬಂದಿದ್ದ ಸಂಕಷ್ಟ ದೂರಾವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಡಿಕೆಶಿ ತಾಯಿ ಆ ದಿನ ಹರಕೆ ಕಟ್ಟಿಕೊಂಡಿದ್ದ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಮತ್ತೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದರು. ಆ ದಿನ‌ ಕಟ್ಟಿಕೊಂಡಿದ್ದ ಹರಿಕೆ ತೀರಿಸಿದರು. ಅಲ್ಲದೇ, ತಮಗೆ ಇಲ್ಲಿಗೆ ಬಂದ ಮೇಲೆ ಒಳ್ಳೆಯದಾಗಿದೆ, ಮನಸ್ಸಿಗೆ ತೃಪ್ತಿ ನೀಡಿದೆ ಮುಂದೆಯೂ ಒಳ್ಳೆಯದು ಮಾಡಲಿ ಎಂದು ಆಂಜನೇಯನಿಗೆ ಪೂಜೆ ನೆರವೇರಿಸಿದ್ದಾಗಿ ತಿಳಿಸಿದರು.
ಮಂಡ್ಯ(ಸೆ. 01): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಕಳೆದ ತಿಂಗಳು ಐಟಿ ದಾಳಿ ನಡೆದಿತ್ತು. ಈ ವೇಳೆ ಡಿ.ಕೆ.ಶಿವಕುಮಾರ್ ಸಂಕಷ್ಟ ನೋಡಲಾಗದೆ ಕೊರಗಿಹೋಗಿದ್ದ ಅವರ ತಾಯಿ ಗೌರಮ್ಮ ಅವರು ಮದ್ದೂರಿನ ಹೊಳೆ ಆಂಜನೇಯಸ್ವಾಮಿ ಮೊರೆ ಹೋಗಿದ್ದರು. ತಮ್ಮ ಮಗನಿಗೆ ಬಂದಿರೋ ಸಂಕಷ್ಟ ದೂರ ಮಾಡುವಂತೆ ಒಂದು ಕಾಲು ರೂಪಾಯಿ ಕಾಣಿಕೆ ಇಟ್ಟು ಹರಿಕೆ ಹೊತ್ತು ಹೊರಬಂದಿದ್ರು. ಪವಾಡವೆಂಬಂತೆ ಅದೇ ದಿನ ಡಿಕೆಶಿ ಮನೆಯಲ್ಲಿ ಐಟಿ ದಾಳಿ ಮುಗಿಸಿ ಅಧಿಕಾರಿಗಳು ಹೊರ ಬಂದಿದ್ರು. ಸದ್ಯ ಡಿಕೆಶಿ ಮೇಲೆ ಬಂದಿದ್ದ ಸಂಕಷ್ಟ ದೂರಾವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಡಿಕೆಶಿ ತಾಯಿ ಆ ದಿನ ಹರಕೆ ಕಟ್ಟಿಕೊಂಡಿದ್ದ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಮತ್ತೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದರು. ಆ ದಿನ ಕಟ್ಟಿಕೊಂಡಿದ್ದ ಹರಿಕೆ ತೀರಿಸಿದರು. ಅಲ್ಲದೇ, ತಮಗೆ ಇಲ್ಲಿಗೆ ಬಂದ ಮೇಲೆ ಒಳ್ಳೆಯದಾಗಿದೆ, ಮನಸ್ಸಿಗೆ ತೃಪ್ತಿ ನೀಡಿದೆ ಮುಂದೆಯೂ ಒಳ್ಳೆಯದು ಮಾಡಲಿ ಎಂದು ಆಂಜನೇಯನಿಗೆ ಪೂಜೆ ನೆರವೇರಿಸಿದ್ದಾಗಿ ತಿಳಿಸಿದರು.
ಹೊಳೆ ಆಂಜನೇಯ ವಿಶೇಷತೆ ಏನು?
ಮದ್ದೂರು ಬಳಿ ಶಿಂಷಾ ನದಿ ತಟದಲ್ಲಿರುವ ಹೊಳೆ ಆಂಜನೇಯ ದೇವಸ್ಥಾನವು ಸ್ಥಳೀಯರಲ್ಲಿ ಹನುಮಂತರಾಯ ಎಂದೇ ಖ್ಯಾತವಾಗಿದೆ. 500 ವರ್ಷಗಳಿಗೂ ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವ್ಯಾಸರಾಜ ಮತ್ತು ಶ್ರೀಪಾದರಾಜರು ಕಟ್ಟಿಸಿದರೆನ್ನಲಾದ ಈ ದೇವಸ್ಥಾನದಲ್ಲಿ ಆಂಜನೇಯ ಮೂರ್ತಿಯ ನೆತ್ತಿಯ ಮೇಲೆ ಸೂರ್ಯ ಮತ್ತು ಚಂದ್ರರಿದ್ದಾರೆ. ಕೆಲವಾರು ವರ್ಷಗಳಿಂದ ಈ ಮೂರ್ತಿಯು ಪ್ರತೀ ವರ್ಷ ಅರ್ಧ ಅಂಗುಲದಷ್ಟು ಬೆಳೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸಾಕಷ್ಟು ಮಹಿಮೆ ಇದೆ ಎನ್ನಲಾದ ಈ ದೇವಸ್ಥಾನದಲ್ಲಿ ಯಾರೇ ಹರಕೆ ಕಟ್ಟಿಕೊಂಡರೂ ಈಡೇರುತ್ತದೆ ಎಂಬ ನಂಬಿಕೆ ಇದೆ.
