ಯಾರಾದರೂ 2 ಲಕ್ಷ ಅಥವಾ ಅದಕ್ಕೆ ಮೇಲ್ಪಟ್ಟನಗದನ್ನು ಸ್ವೀಕರಿಸಿದರೆ, ಅಷ್ಟೇ ಮೊತ್ತದಷ್ಟುದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದೆ.  ಅಲ್ಲದೆ, ಇಂತಹ ವ್ಯವಹಾರ ನಡೆಸುವವರ ಬಗ್ಗೆ ಮಾಹಿತಿ ಇದ್ದರೆ, blackmoneyinfo@incometax.gov.in'ಗೆ ಇ-ಮೇಲ್‌ ಮಾಡುವಂತೆ ಕೋರಿಕೊಂಡಿದೆ.

ನವದೆಹಲಿ: 2 ಲಕ್ಷ ರು. ಅಥವಾ ಅದಕ್ಕಿಂತ ಮೇಲ್ಪಟ್ಟನಗದು ವ್ಯವ ಹಾರವನ್ನು ಏ.1ರಿಂದಲೇ ಜಾರಿಗೆ ಬರುವಂತೆ ನಿಷೇಧಿಸಿರುವ ಕೇಂದ್ರ ಸರ್ಕಾರ ಈ ಕುರಿತು ಸಾರ್ವಜನಿಕ ರಿಗೆ ಎಚ್ಚರಿಕೆ ನೀಡಿದೆ. ಯಾರಾದರೂ 2 ಲಕ್ಷ ಅಥವಾ ಅದಕ್ಕೆ ಮೇಲ್ಪಟ್ಟನಗದನ್ನು ಸ್ವೀಕರಿಸಿದರೆ, ಅಷ್ಟೇ ಮೊತ್ತದಷ್ಟುದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದೆ.

ಅಲ್ಲದೆ, ಇಂತಹ ವ್ಯವಹಾರ ನಡೆಸುವವರ ಬಗ್ಗೆ ಮಾಹಿತಿ ಇದ್ದರೆ, blackmoneyinfo@incometax.gov.in'ಗೆ ಇ-ಮೇಲ್‌ ಮಾಡುವಂತೆ ಕೋರಿಕೊಂಡಿದೆ.

2017-18ನೇ ಸಾಲಿನ ಬಜೆಟ್‌ನಲ್ಲಿ 3 ಲಕ್ಷ ರು. ಮೇಲ್ಪಟ್ಟನಗದು ವ್ಯವಹಾರ ನಿಷೇಧಿಸುವ ಕುರಿತು ವಿತ್ತ ಸಚಿವ ಅರುಣ್‌ ಜೇಟ್ಲಿ ಘೋಷಣೆ ಮಾಡಿದ್ದರು. ಬಳಿಕ ಹಣಕಾಸು ಮಸೂದೆಯಲ್ಲಿ ಅದನ್ನು 2 ಲಕ್ಷ ರು.ಗೆ ಇಳಿಸಲಾಗಿತ್ತು. ಏ.1ರಿಂದಲೇ ಈ ನಿಯಮ ಜಾರಿಗೆ ಬಂದಿದೆ.