Asianet Suvarna News Asianet Suvarna News

ಶಾಲಾ ಅನುದಾನದ ಮೇಲೆ ಸರ್ಕಾರದ ಕಣ್ಣು..!

ಸರ್ಕಾರಿ ಶಾಲೆಗಳಿಗೆ ಮೀಸಲಿಟ್ಟಿರೋ ಅನುದಾನವನ್ನು ರಾಜ್ಯ ಚುನಾವಣಾ ಕೆಲಸಗಳಿಗೆ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

Govt Using Govt School Fund

ಬೆಂಗಳೂರು (ಮಾ. 13):  ಸರ್ಕಾರಿ ಶಾಲೆಗಳಿಗೆ ಮೀಸಲಿಟ್ಟಿರೋ ಅನುದಾನವನ್ನು ರಾಜ್ಯ ಚುನಾವಣಾ ಕೆಲಸಗಳಿಗೆ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಿಗೆ 25 ಸಾವಿರ,ಫ್ರೌಡ ಶಾಲೆಗಳ ನಿರ್ವಹಣೆಗೆ 50ಸಾವಿರ ಅನುದಾನವನ್ನು ಸರ್ಕಾರ ನೀಡುತ್ತೆ. ಇದರಲ್ಲಿಯೇ ಶಾಲೆಗಳ ಎಲ್ಲಾ ವೆಚ್ಚಗಳನ್ನು ಭರಿಸಬೇಕಾಗುತ್ತೆ. ಹಾಗಾಗಿ ಸರ್ಕಾರದಿಂದ ನೀಡೋ ಅನುದಾನ ನಿರ್ವಹಣೆಗೇ ಸಾಕಾಗ್ತಿಲ್ಲ.ಇನ್ನು ಹೀಗಿದ್ದರೂ ಮುಂಬರುವ ವಿಧಾನಸಭಾ ಚುನಾವಣಾ ಮತಗಟ್ಟೆಗಳಿಗೆ ಆಯ್ಕೆಯಾಗಿರೋ ಶಾಲೆಗಳು ತಮ್ಮಲ್ಲಿರುವ ಅನುದಾನ ಬಳಸಿ ಶಾಲೆಯ ಮೂಲಭೂತ ಸೌಕರ್ಯಗಳಿಗೆ ಖರ್ಚು ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇನ್ನು ಕಳೆದ ಹಲವು ವರ್ಷಗಳಿಂದ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿದ್ದ ಶಾಲೆಗಳ ಅಭಿವೃದ್ದಿಗೆ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಈಗ ಏಕಾಏಕಿ ಚುನಾವಣಾ ಖರ್ಚುಗಳನ್ನು ಕೂಡ ತಮ್ಮ ಶಾಲಾ ಅನುದಾನಗಳಿಂದ ತುಂಬುವಂತೆ ಸೂಚಿಸಿರುವುದು ಶಾಲೆಗಳಿಗೆ ನುಂಗಲಾರದ ತುತ್ತಾಗಿದೆ.

ಒಟ್ಟಿನಲ್ಲಿ, ಶಾಲೆ ಅಭಿವೃದ್ದಿ ಮತ್ತು ನಿರ್ವಹಣೆಗೆ ಮೀಸಲಿಟ್ಟಿರೋ ಹಣ ಈ ರೀತಿ ರಾಜಕೀಯ ಉದ್ದೇಶಗಳಿಗೆ ಬಳಸ್ತಿರೋದು ನಿಜಕ್ಕೂ ಖಂಡನೀಯವಾಗಿದ್ದು, ಆಲ್ಲದೆ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶಕ್ಕೆ ಶಿಕ್ಷಣ ತಜ್ಜರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ..

 

 

 

Follow Us:
Download App:
  • android
  • ios