ಬೆಂಗಳೂರು (ಸೆ. 20):  ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ವೇಳಾಪಟ್ಟಿಯಂತೆ ಅ.6ರಿಂದ 20ರವರೆಗೆ ದಸರಾ ರಜೆ ನೀಡಲಾಗಿದೆ.

ಇತ್ತೀಚೆಗೆ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ ಮನವಿ ಮೇರೆಗೆ ದಕ್ಷಿಣ ಜಿಲ್ಲೆಯ ರಜೆಯನ್ನು ಅ.1ರಿಂದ 15ರ ವರೆಗೆ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೂ ರಜೆ ಅವಧಿಯನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗಾಗಲೇ ನಿರ್ಧಾರವಾಗಿರುವ ವೇಳಾಪಟ್ಟಿಯಂತೆ ರಜೆ ನೀಡುವುದಾಗಿ ಡಿಡಿಪಿಐಗಳು ತಿಳಿಸಿದ್ದರಿಂದ ಉಳಿದ ಜಿಲ್ಲೆಯಲ್ಲಿ ಅ.6ರಿಂದ 20ರ ವರೆಗೆ ಮಧ್ಯಂತರ ರಜೆ ನೀಡಲಾಗಿದೆ.

ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

ನೆರೆ ತೀವ್ರವಿದ್ದ ಸಂದರ್ಭದಲ್ಲಿ ಎಷ್ಟುದಿನ ರಜೆ ನೀಡಲಾಗಿತ್ತೋ ಆ ರಜೆಯನ್ನು ವಾರಾಂತ್ಯಗಳ ರಜೆಯಲ್ಲೂ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸುವಂತೆ ನೆರೆ ಪ್ರದೇಶದ ಡಿಡಿಪಿಐಗಳಿಗೆ ಸೂಚಿಸಲಾಗಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗಾಗಿ ಈ ಪ್ರದೇಶಗಳಲ್ಲೂ ದಸರಾ ರಜೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.