ಬೆಂಗಳೂರು :  ಕೇಂದ್ರ ಸರ್ಕಾರವು ಇದೀಗ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. ಬ್ಯಾಂಕ್ ಗಳಲ್ಲಿ ಠೇವಣಿಯನ್ನು ಹೆಚ್ಚಳ ಮಾಡುವ ಸಲುವಾಗಿ ಹೊಸದಾಗಿ ಉತ್ತೇಜನ ನೀಡಲು ಸಿದ್ಧವಾಗಿದೆ. 

ಎನ್ ಎಸ್ ಸಿ ಹಾಗೂ ಪಿಪಿಎಫ್  ಮೇಲಿನ ಬಡ್ಡಿಯ ದರವನ್ನು ಶೇ.0.4ರಷ್ಟು ಏರಿಕೆ ಮಾಡಲು ನಿರ್ಧಾರ ಮಾಡಿದ್ದು,  ಅಕ್ಟೋಬರ್ ನಿಂದ  ಡಿಸೆಂಬರ್ ತಿಂಗಳ ಅವಧಿಯಲ್ಲಿ ಬಡ್ಡಿದರವು ಏರಿಕೆಯಾಗಲಿದೆ.  ಸಣ್ಣ ಹೂಡಿಕೆಗಳ ಮೇಲೆ ತ್ರೈಮಾಸಿಕ ಅವಧಿಯ ಆಧಾರದ ಮೇಲೆ ಬಡ್ಡಿದರವನ್ನು ಏರಿಕೆ ಮಾಡಲಾಗುತ್ತದೆ. 

ಸಣ್ಣ ಹೂಡಿಕೆ ಯೋಜನೆಗಳ ಮೇಲೆ 2018 ರಿಂದ 19ರ ಆರ್ಥಿಕ ವರ್ಷದ ಅವಧಿಯಲ್ಲಿ ಅಕ್ಟೋಬರ್ ಒಂದರಿಂದ ಮೊದಲ ಏರಿಕೆಯಾಗಲಿದೆ. ತ್ರೈಮಾಸಿಕವಾಗಿ ಬಡ್ಡಿಯ ದರವನ್ನು ಏರಿಕೆ ಮಾಡಲಾಗುತ್ತದೆ  ಎಂದು ಹಣಕಾಸು ಸಚಿವಾಲಯ ಹೇಳಿದೆ. 

ಒಟ್ಟು ಐದು ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿಯ ದರ ಹೆಚ್ಚಳವಾಗಲಿದೆ. ಇನ್ನು ಹಿರಿಯ ನಾಗರಿಕ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರವೂ ಕೂಡ ಮೂರು ಬಾರಿ ಏರಿಕೆಯಾಗಲಿದ್ದು ಮೊದಲ ಬಾರಿ ಶೇ.7.8, ರಿಂದ ಶೇ.8.7ರವರೆಗೆ ಏರಿಕೆಯಾಗಲಿದೆ.  ಇದರಲ್ಲಿಯೂ ಕೂಡ ತ್ರೈಮಾಸಿಕವಾಗಿಯೇ ಏರಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. 

ಇನ್ನು ಪಿಪಿಎಫ್ ಮೇಲೆ ಹಾಗೂ ಎನ್ ಎಸ್ ಸಿ ಮೇಲೆಯೂ ಕೂಡ ಶೇ.8ರಷ್ಟು  ಬಡ್ಡಿದರ ಏರಿಕೆಯಾಗಲಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ  ಸುಕನ್ಯಾ ಸಮೃದ್ಧಿ ಖಾತೆಗಳ ಬಡ್ಡಿದರವೂ ಕೂಡ  ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.