ಲೈಂಗಿಕ ಹಗರಣ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಹಜಹಾನ್ ಯುವತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಗ ಬಿಡುಗಡೆಯಾಗಿ 5 ದಿನಗಳಾದರೂ ವಿಶ್ವವಿದ್ಯಾಲಯ ಪ್ರಕರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಹಾವೇರಿ (ಜ.17): ಜಾನಪದ ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿಯ ಲೈಂಗಿಕ ಹಗರಣದ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.
ಇನ್ನೊಂದೆಡೆ ಶಹಜಹಾನ್ ಪರ ಹಾಗೂ ವಿರುದ್ಧ ಪ್ರತಿಭಟನೆ ಜೋರಾಗಿದೆ. ಶಹಜಹಾನ್ ಬಳಿ ಸ್ಪಷ್ಟೀಕರಣ ಕೇಳಲು ವಿಶ್ವವಿದ್ಯಾಲಯ ಸಿದ್ದತೆ ನಡೆಸಿದ್ದು, ಈ ಪ್ರಕರಣ ಶಹಜಹಾನ್ ಕೆಲಸಕ್ಕೆ ಕುತ್ತು ತರುವುದೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಲೈಂಗಿಕ ಹಗರಣ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಹಜಹಾನ್ ಯುವತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಗ ಬಿಡುಗಡೆಯಾಗಿ 5 ದಿನಗಳಾದರೂ ವಿಶ್ವವಿದ್ಯಾಲಯ ಪ್ರಕರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಈಗ ಸರ್ಕಾರವೇ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಕೇಳಿದೆ. ಇನ್ನೊಂದೆಡೆ ಶಹಜಹಾನನನ್ನು ವಜಾಗೊಳಿಸುವಂತೆ ಎಬಿವಿಪಿ ಇಂದು ವಿವಿ ಎದುರು ಪ್ರತಿಭಟನೆ ನಡೆಸಿತು.