ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಎಡಪ್ಪಾಡಿ ಪಳನಿಸ್ವಾಮಿ 124 ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದಾರೆ.

ಚೆನ್ನೈ (ಫೆ.16): ಕಳೆದ 10 ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಬಹುಮತ ಸಾಬೀತುಪಡಿಸುವಂತೆ ಪಳನಿಸ್ವಾಮಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಆಹ್ವಾನಿಸುವ ಮೂಲಕ ಪನ್ನೀರ್ ಸೆಲ್ವಂ ಅವರ ಮುಖ್ಯಮಂತ್ರಿ ಕನಸು ಭಗ್ನಗೊಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಎಡಪ್ಪಾಡಿ ಪಳನಿಸ್ವಾಮಿ 124 ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದಾರೆ.

ರಾಜ್ಯಪಾಲರು ಪಳನಿಸ್ವಾಮಿಗೆ ಬಹಉಮತ ಸಾಬೀತುಪಡಿಸಲು 15 ದಿನಗಳ ಗಡುವು ನೀಡಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 118 ಶಾಸಕರ ಮತಗಳನ್ನು ಪಳನಿಸ್ವಾಮಿ ಪಡೆಯಬೇಕು

ಸಂಜೆ 4 ಗಂಟೆಗೆಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಳನಿಸ್ವಾಮಿ, ಬಳಿಕ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಪಳನಿಸ್ವಾಮಿ ಜತೆಗೆ ಜೊತೆ 31 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.