ಸರ್ಚ್ ಇಂಜಿನ್'ಗೆಂದು ಪರವಾನಗಿ ಪಡೆದ ಗೂಗಲ್ ಸಂಸ್ಥೆ ಅಕ್ರಮವಾಗಿ ಶಾಪಿಂಗ್ ಸೇವೆ ಸೇರಿದಂತೆ ಬೇರೆ ಸೇವೆ ಒದಗಿಸಿದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ. ಈ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿ 90 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ಕಂಪೆನಿ ಅಕ್ರಮ ಸೇವೆಗಳನ್ನು ಮುಂದುವರಿಸಿದ ಕಾರಣ ದಿನನಿತ್ಯದ ಜಾಗತಿಕ ವಹಿವಾಟಿನ ಶೇಕಡ 5ರಷ್ಟು ದಂಡ ವಿಧಿಸಲು ಒಕ್ಕೂಟ ತೀರ್ಮಾನಿಸಿದೆ.

ಬ್ರೂಸೆಲ್ಸ್(ಜೂ.27): ಜಾಗತಿಕ ಪ್ರಸಿದ್ಧ ನಂ.1 ಸರ್ಚ್ ಇಂಜಿನ್ ಸಂಸ್ಥೆಗೆ ನಂಬಿಕರ ದ್ರೋಹ ಮಾಡಿದ ಪ್ರಕರಣವೊಂದರಲ್ಲಿ ಯೂರೋಪಿಯನ್ ಒಕ್ಕೂಟ ಸರಿಸುಮಾರು 16 ಸಾವಿರ ಕೋಟಿ ರೂ. (2.7 ಬಿಲಿಯನ್ ಡಾಲರ್) ದಂಡ ವಿಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಚ್ ಇಂಜಿನ್'ಗೆಂದು ಪರವಾನಗಿ ಪಡೆದ ಗೂಗಲ್ ಸಂಸ್ಥೆ ಅಕ್ರಮವಾಗಿ ಶಾಪಿಂಗ್ ಸೇವೆ ಸೇರಿದಂತೆ ಬೇರೆ ಸೇವೆ ಒದಗಿಸಿದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ. ಈ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿ 90 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ಕಂಪೆನಿ ಅಕ್ರಮ ಸೇವೆಗಳನ್ನು ಮುಂದುವರಿಸಿದ ಕಾರಣ ದಿನನಿತ್ಯದ ಜಾಗತಿಕ ವಹಿವಾಟಿನ ಶೇಕಡ 5ರಷ್ಟು ದಂಡ ವಿಧಿಸಲು ಒಕ್ಕೂಟ ತೀರ್ಮಾನಿಸಿದೆ.

ಯೂರೋಪಿಯನ್ ಗ್ರಾಹಕರಿಗೆ ಗೂಗಲ್ 2004ರಲ್ಲಿ ಶಾಪಿಂಗ್ ಮಾಡುವ ಅವಕಾಶವನ್ನು ‘ಫೂಗಲ್’ ಎಂಬ ಹೆಸರಿನಲ್ಲಿ ಆರಂಭಿಸಲಾಗಿತ್ತು. ನಂತರ ಗೂಗಲ್ ಪ್ರಾಡಕ್ಟ್ ಸರ್ಚ್ ಹಾಗೂ ಗೂಗಲ್ ಶಾಪಿಂಗ್ ಎಂದು ಹೆಸರು ಬದಲಾಯಿಸಲಾಗಿತ್ತು. ತಾವು ನಿಯಮಬದ್ಧ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿರುವ ಗೂಗಲ್ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.