ಯುವಲುಕೋಸ್, ತೇಜಸ್, ರಫೆಲ್, ವಿಲ್ಲಿ ಹ್ಯಾಕೆಡ್, ಸಾರಂಗ್, ಗ್ರಿಪ್ಪನ್ ಹಾಗೂ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಹೆಲಿಕಾಪ್ಟರ್ಗಳ ಬಳುಕಿನ ವೈಯಾರ ಅನಾವರಣವಾಯ್ತು. ಬಲಿಷ್ಠ ಸಮರ ವಿಮಾನಗಳು ಇಡೀ ಆಕಾಶವನ್ನ ಆವರಿಸಿಕೊಂಡು ತಾಕತ್ತು ಪ್ರದರ್ಶಿಸಿದವು.
ಬೆಂಗಳೂರು (ಫೆ.15): ಏಷ್ಯಾದ ಅತಿದೊಡ್ಡ ಏರ್ ಶೋಗೆ ಎರಡನೇ ದಿನ. ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಸದ್ದು ಇವತ್ತೂ ಮುಂದುವರಿದಿವೆ. ವಿವಿಧ ಬಗೆಯ ಲಘು ಯುದ್ಧ ವಿಮಾನಗಳ ಆರ್ಭಟಕ್ಕೆ ಸಾರ್ವಜನಿಕರು ಮನಸೋತರು. ಫ್ರಾನ್ಸಿನ ರಫೆಲ್ ಯುದ್ಧ ವಿಮಾನದಲ್ಲಿ ಅನಿಲ್ ಅಂಭಾನಿ ಪಯಣ ಬೆಳೆಸಿದ್ದು ವಿಶೇಷವಾಗಿತ್ತು..
ಬೆಳಗ್ಗೆ ಹತ್ತುಗಂಟೆಗೆ ಶುರುವಾದ ಏರ್ ಶೋಗೆ ಎರಡನೇ ದಿನವೂ ಭಾರೀ ಸ್ಪಂದನೆ ವ್ಯಕ್ತವಾಯ್ತು. ಸಾರ್ವಜನಿಕರು ಬಿಸಿಲನ್ನೂ ಲೆಕ್ಕಿಸದೆ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಒಂಟಿಕಾಲಿನಲ್ಲಿ ನಿಂತಿದ್ದರು.
ಯುವಲುಕೋಸ್, ತೇಜಸ್, ರಫೆಲ್, ವಿಲ್ಲಿ ಹ್ಯಾಕೆಡ್, ಸಾರಂಗ್, ಗ್ರಿಪ್ಪನ್ ಹಾಗೂ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಹೆಲಿಕಾಪ್ಟರ್ಗಳ ಬಳುಕಿನ ವೈಯಾರ ಅನಾವರಣವಾಯ್ತು. ಬಲಿಷ್ಠ ಸಮರ ವಿಮಾನಗಳು ಇಡೀ ಆಕಾಶವನ್ನ ಆವರಿಸಿಕೊಂಡು ತಾಕತ್ತು ಪ್ರದರ್ಶಿಸಿದವು.
ಸೆಕೆಂಡ್ ಡೇ ಸ್ಪೆಷಲ್: ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ, ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಕಂಪನಿಗಾಗಿ ಫ್ರಾನ್ಸಿನ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಒಡಂಬಡಿಕೆ ಮಾಡಿಕೊಂಡಿದ್ದು. ರಫೆಲ್ ವಿಮಾನವೇರಿ ಸುಮಾರು ಅರ್ಧಗಂಟೆಗಳ ಕಾಲ ಖುದ್ದು ಸಾಮರ್ಥ್ಯ ಪರೀಕ್ಷೆ ನಡೆಸಿದರು.
(ವರದಿ: ಮುತ್ತಪ್ಪ ಲಮಾಣಿ ಜೊತೆ ಶಶಿಶೇಖರ್)