ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನ ನೀಡುತ್ತಿದೆ.ಹಬ್ಬದ ಈ ಸಂದರ್ಭದಲ್ಲಿ ಭರ್ಜರಿ ಕ್ಯಾಶ್ ಬ್ಯಾಕ್ ಹಾಗೂ ಡಿಸ್ಕೌಂಟ್ ಆಫರ್ ನೀಡುತ್ತಿದೆ. 

ನವದೆಹಲಿ : ಇನ್ನೇನು ಹಬ್ಬಗಳ ಸಾಲು ಸಾಲು ಆರಂಭವಾಗುತ್ತಿದೆ. ಇದೇ ವೇಳೆಗೆ ಎಸ್ ಬಿಐ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಟೇಟ್ ಬ್ಯಾಂಕ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಹಬ್ಬದ ಸಲುವಾಗಿ ಕ್ಯಾಶ್ ಬ್ಯಾಕ್ ಆಫರ್ ಮತ್ತು ವಿವಿಧ ರೀತಿಯ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. 

ನೀವು ಎಸ್ ಬಿಐ ಯೋನೋ ಆ್ಯಪ್ ಡೌನ್ ಲೋಡ್ ಮಾಡಿಕೊಂಡಲ್ಲಿ ನಿಮಗೆ ಅತ್ಯಂತ ಲಾಭದಾಯಕವಾದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. 

ಯೋನೋ ಆ್ಯಪ್ ಮೂಲಕ ಲೈಫ್ ಸ್ಟೈಲ್ ಮತ್ತು ಫೈನಾನ್ಸಿಯಲ್ ಸರ್ವೀಸ್ ಗೆ ಆಫರ್ ಒದಗಿಸಿಕೊಡುತ್ತಿದೆ. ಈ ಸೇವೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಳೆದ ವರ್ಷ ನವೆಂಬರ್ ಒಂದರಂದೇ ಚಾಲನೆ ನೀಡಿದ್ದಾರೆ. 

14 ವಿಧದ ಸೇವೆಗಳಿಗೆ ಯೋನೋ ಆಫರ್ ಅನ್ವಯವಾಗಲಿದೆ. ರೆಂಟಿಂಗ್ ಕ್ಯಾಬ್ ಸೇವೆ, ಮನರಂಜನೆ, ಹೋಟೆಲ್, ಟ್ರಾವೆಲ್, ಮೆಡಿಕಲ್ ಸೇರಿದಂತೆ ವಿವಿಧ ಸೇವೆಗಳಿಗೆ ಈ ಆಫರ್ ಅನ್ವಯವಾಗಲಿದೆ. 
ಒಟ್ಟು 60 ಇ ಕಾಮರ್ಸ್ ಸೇವೆಗಳೊಂದಿಗೆ ಎಸ್ ಬಿಐ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ.