ಪ್ರಧಾನಿ ಮೊದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

First Published 25, Jun 2018, 1:47 PM IST
Good news for organized sector employees
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದೀಗ ಶುಭ ಸುದ್ದಿಯೊಂದನ್ನು ನೀಡುತ್ತಿದೆ. ಸಂಘಟನಾ ವಲಯದ ಕಾರ್ಮಿಕರ ಪಿಂಚಣಿ  ಮೊತ್ತವನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ. 

ನವದೆಹಲಿ :  ಸಂಘಟನಾ ವಲಯದ ಕಾರ್ಮಿಕರಿಗೆ  ಇಲ್ಲಿದೆ ಒಂದು ಶುಭ ಸುದ್ದಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈ ನೌಕರರ ಕನಿಷ್ಟ ಪಿಂಚಣಿಯ ಮೊತ್ತವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಅಲ್ಲದೇ ಪಿಂಚಣಿಯನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. 

ಎಲ್ಲಾ ಸಂಘಟನಾ ವಲಯದ ನೌಕರರಿಗೂ ಕೂಡ ಈ ವಿಚಾರ ಅನ್ವಯವಾಗಲಿದ್ದು ,  ಒಂದು ವೇಳೆ ಜಾರಿಯಾದಲ್ಲಿ ಲಕ್ಷಾಂತರ ನೌಕರರು ಇದರ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. 

ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಕಾರ್ಮಿಕ ಸಚಿವಾಲಯದಿಂದ ರಚಿಸಲಾಗಿದ್ದು, ಈ ಸಮಿತಿಯು ಸಂಘಟನಾ ವಲಯದ ಕಾರ್ಮಿಕರು ತಿಂಗಳಿಗೆ ಪಡೆಯುತ್ತಿರುವ ಪಿಂಚಣಿ ಮೊತ್ತ 1 ಸಾವಿರ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವುದು ಅತ್ಯಗತ್ಯ ಎಂದು ಹೇಳಿದೆ. 

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಘಟನಾ ವಲಯದ ನೌಕರರ ಪಿಂಚಣಿ ಮೊತ್ತವನ್ನು 2000ರು.ವರೆಗೂ ಕೂಡ ಏರಿಕೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಭವಿಷ್ಯದಲ್ಲಿ ಈ ಮೊತ್ತವು 5000 ವರೆಗೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿದ್ದು,  ಇದರಿಂದ ಬಡ  ಸಂಘಟನಾ ವಲಯದ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವುಂಟಾಗಲಿದೆ ಎಂದು ಸಮಿತಿಯ ಸದಸಸ್ಯರೋರ್ವರು  ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

loader