ಭಾರತೀಯ ಬೀಡಿಗಳಿಗೆ ರಷ್ಯಾದ ಜನರು ಅಭಿಮಾನಿಗಳಾಗಿದ್ದಾರೆ. ದುಬಾರಿ ಹಣ ಕೊಟ್ಟು ಒಂದು ಪ್ಯಾಕೆಟ್ ಖರೀದಿ ಮಾಡ್ತಾರೆ
ರಷ್ಯಾದ ಜನರು ಭಾರತೀಯ ಬೀಡಿಗಳ ಅಭಿಮಾನಿಗಳು, ಮತ್ತು ಅವು ಅಲ್ಲಿನ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ.
ರಷ್ಯಾದ ಜನರು ಭಾರತೀಯ ಬೀಡಿಗಳಿಗೆ ಉತ್ತಮ ಬೆಲೆ ನೀಡಲು ಸಿದ್ಧರಿದ್ದಾರೆ.
ಅಂತಹ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ರಷ್ಯಾದ ಅಂಗಡಿಯೊಂದರಲ್ಲಿ ಬೀಡಿ ಮಾರಾಟವಾಗುತ್ತಿರುವುದನ್ನು ತೋರಿಸಲಾಗಿದೆ.
ಈ ವೀಡಿಯೊದ ಶೀರ್ಷಿಕೆಯಲ್ಲಿ "ರಷ್ಯನ್ನರು ಬೀಡಿಗಳ ಫ್ಯಾನ್ಸ್" ಇದು ರಷ್ಯಾದ ಒಂದು ಸಣ್ಣ ಅಂಗಡಿಯಲ್ಲಿ ಬೀಡಿಗಳನ್ನು ಮಾರಾಟ ಮಾಡುವುದನ್ನು ತೋರಿಸುತ್ತದೆ.
ಒಬ್ಬ ರಷ್ಯನ್ ವ್ಯಕ್ತಿ ಅಂಗಡಿಗೆ ಬಂದು ಬೀಡಿ ಖರೀದಿ ಮಾಡಿದ್ದಾನೆ. ವಿಡಿಯೋ ಮಾಡುತ್ತಿರುವ ವ್ಯಕ್ತಿಯು ಬೀಡಿ ಪ್ಯಾಕೆಟ್ ಅನ್ನು ತೋರಿಸುತ್ತಾನೆ.
ಆ ಬೀಡಿ ಪ್ಯಾಕೆಟ್ ಭಾರತದಲ್ಲಿ ತಯಾರಾಗಿದ್ದು, ಅದರ ಮೇಲೆ ಬಂಗಾಳಿ ಭಾಷೆಯಲ್ಲಿ ಏನೋ ಬರೆಯಲಾಗಿದೆ.
ಆ ವ್ಯಕ್ತಿ ಪ್ಯಾಕೆಟ್ ಅನ್ನು ಕ್ಯಾಶ್ ಕೌಂಟರ್‌ಗೆ ನೀಡುತ್ತಾನೆ ಮತ್ತು ಕೌಂಟರ್‌ನಲ್ಲಿ ನಿಂತಿರುವ ಮಹಿಳೆ ಒಂದು ಪ್ಯಾಕೆಟ್‌ಗೆ 150 ರೂಬಲ್‌ಗಳನ್ನು ತೆಗೆದುಕೊಳ್ಳುತ್ತಾಳೆ.
150 ರೂಬೆಲ್ ಅಂದರೆ ಭಾರತೀಯ ರೂಪಾಯಿಯಲ್ಲಿ 175 ರೂಪಾಯಿ ಆಗಿದೆ. ಒಂದು ಪ್ಯಾಕೆಟ್ ಬೀಡಿ 175 ರೂಪಾಯಿಗೆ ಮಾರಾಟವಾಗ್ತಿದೆ.
ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ಬಂಗಾಳದಲ್ಲಿ ಬರೀದ 5 ರೂಪಾಯಿ ಎಂದಿದ್ದಾರೆ. ಇದು ಬಂಗಾಳದ ವರ್ಧಮಾನ್ ಬೀಡಿ ಎಂದು ಹೇಳಿದ್ದಾರೆ.
ತೇಜ್ ಪ್ರತಾಪ್: ಹೀನಾಯ ಸೋಲು.. ಕುಟುಂಬದಿಂದ ದೂರ, ಮುಂದೇನು ಲಾಲು ಪುತ್ರರ ನಡೆ?
ಪ್ರಧಾನಿ ಮೋದಿಯ 2014-2025 ರವರೆಗೆ ಧರಿಸಿದ 11 ಪೇಟಗಳಲ್ಲಡಗಿದೆ ವಿಶೇಷ ಸಂದೇಶ!
ಅಮೆಜಾನ್ ಅರಣ್ಯ ಚಿಕ್ಕದಾಗ್ತಿದೆಯಾ? 40 ವರ್ಷಗಳಲ್ಲಿ 50 ಮಿಲಿಯನ್ ಹೆಕ್ಟೇರ್ ನಷ್ಟ
ಫೋಟೋಗಳಲ್ಲಿ ನೋಡಿ ಕನ್ವರ್ ಯಾತ್ರೆಯ ರಂಗು : ಶಿವಭಕ್ತಿಯ ಪವಿತ್ರ ಸಂಚಾರ