Asianet Suvarna News Asianet Suvarna News

ಗೋಧ್ರಾ ದುರಂತ: 11 ಮಂದಿಯ ಮರಣದಂಡನೆ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

ಹದಿನೈದು ವರ್ಷಗಳ ಹಿಂದಿನ ಸಾಬರ್'ಮತಿ ಎಕ್ಸ್'ಪ್ರೆಸ್ ರೈಲು ಅಗ್ನಿ ಅವಘಡ ಪ್ರಕರಣದಲ್ಲಿ 11 ಮಂದಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಗುಜರಾತ್ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಕೆಳ ನ್ಯಾಯಲಯವು 11 ಮಂದಿ ದೋಷಿಗಳಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿದೆ.

Godhra train burning case Gujarat HC commutes death sentence to 11 convicts into life imprisonment

ಗಾಂಧಿನಗರ: ಹದಿನೈದು ವರ್ಷಗಳ ಹಿಂದಿನ ಸಾಬರ್'ಮತಿ ಎಕ್ಸ್'ಪ್ರೆಸ್ ರೈಲು ಅಗ್ನಿ ಅವಘಡ ಪ್ರಕರಣದಲ್ಲಿ 11 ಮಂದಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಗುಜರಾತ್ ಹೈಕೋರ್ಟ್ ಇಂದು ರದ್ದುಗೊಳಿಸಿದೆ.

ಕೆಳ ನ್ಯಾಯಲಯವು 11 ಮಂದಿ ದೋಷಿಗಳಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿದೆ.

2002ರಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಸಾಬರಮತಿ ಎಕ್ಸ್'ಪ್ರೆಸ್ ರೈಲಿನ ಎಸ್-6 ಕೋಚ್'ನಲ್ಲಿ ಬೆಂಕಿ ಹೊತ್ತಿಕೊಂಡು ಉರಿದು 59 ಮಂದಿ ಸುಟ್ಟುಕರಕಲಾಗಿದ್ದರು. ರೈಲಿನಲ್ಲಿದ್ದವರಲ್ಲಿ ಬಹುತೇಕರು ಅಯೋಧ್ಯೆಯಿಂದ ವಾಪಸ್ ಬರುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆಯು ಗುಜರಾತ್'ನಾದ್ಯಂತ ದೊಡ್ಡ ಹಿಂಸಾಚಾರಗಳಿಗೆ ಕಾರಣವಾಗಿತ್ತು.

ಗುಜರಾತ್ ಸರಕಾರ ನೇಮಿಸಿದ ನಾನಾವತಿ ಆಯೋಗವು ಆ ಘಟನೆಯ ತನಿಖೆ ನಡೆಸಿತ್ತು. ಗೋಧ್ರಾ ದುರಂತವು ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ನಡೆದ ಘಟನೆಯಾಗಿತ್ತು ಎಂದು ಆಯೋಗದ ವರದಿಯಿಂದ ಗೊತ್ತಾಗಿದೆ. 2011ರಲ್ಲಿ ಎಸ್'ಐಟಿ ವಿಶೇಷ ನ್ಯಾಯಾಲಯವು 31 ಜನರನ್ನು ಅಪರಾಧಿಗಳೆಂದು ಪರಿಗಣಿಸಿ ತೀರ್ಪು ನೀಡಿತ್ತು. ಪ್ರಕರಣದಲ್ಲಿ ಇನ್ನುಳಿದ 63 ಆರೋಪಿಗಳನ್ನ ಖುಲಾಸೆ ಕೂಡ ಮಾಡಲಾಗಿತ್ತು.

ದೋಷಿಗಳೆಂದು ತೀರ್ಮಾನಿಸಲಾದ 63 ಮಂದಿ ಪೈಕಿ 11 ಜನರಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Follow Us:
Download App:
  • android
  • ios