ಗುಂಡ್ಲುಪೇಟೆಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈ ಫಲಿತಾಂಶವು ತಣ್ಣೀರೆರಚಿದಂತಾಗಿದೆ.

ಚಾಮರಾಜನಗರ(ಏ. 13): ಕಾಂಗ್ರೆಸ್'ನ ಗೀತಾ ಮಹದೇವಪ್ರಸಾದ್ ಅವರು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ದೈವಾಧೀನರಾದ ಮಾಜಿ ಸಚಿವ ಮಹದೇವಪ್ರಸಾದ್ ಅವರ ಪತ್ನಿ ಗೀತಾ ಅವರು 12,077 ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ನಿರಂಜನ್ ಕುಮಾರ್ ಅವರನ್ನು ಸೋಲಿಸಿದ್ದಾರೆ. 16 ಸುತ್ತುಗಳ ಮತ ಎಣಿಕೆಯಲ್ಲಿ ಗೀತಾ ಮಹದೇವಪ್ರಸಾದ್ 90 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೀತಾ ಮಹದೇವ್'ಪ್ರಸಾದ್, ಇದು ತಮ್ಮ ಪತಿಯ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಗೆಲುವಾಗಿದೆ ಎಂದಿದ್ದಾರೆ. ಪತಿ ನಿಧನದ ಅನುಕಂಪದ ಅಲೆಯಿಂದ ತಾನು ಗೆದ್ದಿಲ್ಲ. ಬದಲಾಗಿ, ಪತಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಜನರು ನೀಡಿರುವ ಮನ್ನಣೆ ಇದಾಗಿದೆ. ತಾನು ಆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಗೀತಾ ಮಹದೇವ್ ಪ್ರಸಾದ್ ಹೇಳಿದ್ದಾರೆ.

ಗುಂಡ್ಲುಪೇಟೆಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈ ಫಲಿತಾಂಶವು ತಣ್ಣೀರೆರಚಿದಂತಾಗಿದೆ.

ಕ್ಷೇತ್ರದ ಮತ ವಿವರ:
ಗೀತಾ ಮಹದೇವಪ್ರಸಾದ್: 90,258 ಮತಗಳು
ನಿರಂಜನ್ ಕುಮಾರ್: 79,381