ಗೌರಿ ಲಂಕೇಶ್ ಹತ್ಯೆ ನಂತರ ಒಂದು ತಿಂಗಳು ಕಳೆದರೂ ಕೂಡ ಇನ್ನು ಹಂತಕರ ಬಂಧನ ಆಗದೆ ಇರುವುದನ್ನು ಪ್ರತಿಭಟಿಸಿ ಎಡ ಸಂಘಟನೆಗಳ ಒಕ್ಕೂಟ ಇಂದು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು. ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ ಭೂಷಣ್, ತೀಸ್ತಾ ಸೆಟಲ್ ವಾಡ್ ನ್ಯಾಯಮೂರ್ತಿ ನಾಗಮೋಹನ್ ದಾಸ್,  ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ಜೆಎನ್'ಯು ವಿದ್ಯಾರ್ಥಿಗಳ ಘೋಷಣೆ ಗಮನ ಸೆಳೆದವು.

ನವದೆಹಲಿ (ಅ.05): ಗೌರಿ ಲಂಕೇಶ್ ಹತ್ಯೆ ನಂತರ ಒಂದು ತಿಂಗಳು ಕಳೆದರೂ ಕೂಡ ಇನ್ನು ಹಂತಕರ ಬಂಧನ ಆಗದೆ ಇರುವುದನ್ನು ಪ್ರತಿಭಟಿಸಿ ಎಡ ಸಂಘಟನೆಗಳ ಒಕ್ಕೂಟ ಇಂದು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು. ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ ಭೂಷಣ್, ತೀಸ್ತಾ ಸೆಟಲ್ ವಾಡ್ ನ್ಯಾಯಮೂರ್ತಿ ನಾಗಮೋಹನ್ ದಾಸ್, ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ಜೆಎನ್'ಯು ವಿದ್ಯಾರ್ಥಿಗಳ ಘೋಷಣೆ ಗಮನ ಸೆಳೆದವು.

ಆದರೆ ಕರ್ನಾಟಕದ ಕಾನೂನು ಸುವ್ಯವಸ್ಥೆ ಜವಾಬ್ದಾರಿ ಹೊತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಒಂದು ಘೋಷಣೆ ಹಾಕದ ಎಡ ಸಂಘಟನೆ ಗಳ ಕಾರ್ಯಕರ್ತರ ಟಾರ್ಗೆಟ್ ಕೇವಲ ಮತ್ತು ಕೇವಲ ಮಾತ್ರ ನರೇಂದ್ರ ಮೋದಿ ಆಗಿದ್ದರು.ಆದರೆ ಇದನ್ನು ಪ್ರಶ್ನಿಸಿದ್ದಕ್ಕೆ ತೀಸ್ತಾ ಸೆಟಲ್ ವಾಡ್ ಕೋಪಿಸಿಕೊಂಡು ಕೂಗಾಡಿದರು. ದೆಹಲಿಯ ಪ್ರತಿಭಟನೆಯಲ್ಲಿ ಬೆಂಗಳೂರಿನ ನಾನು ಗೌರಿ ಪ್ರತಿಭಟನೆಯಷ್ಟು ಜನ ಕಾವು ಉತ್ಸಾಹ ಕಾಣಲಿಲ್ಲ.ಅಷ್ಟೇ ಅಲ್ಲ ಗೌರಿ ಲಂಕೇಶ್ ಮಕ್ಕಳು ಎಂದು ಕರೆಯುತ್ತಿದ್ದ ಕಣ್ಣಯ್ಯ ಕುಮಾರ ಜಿಗನೇಶ್ ಮೇವಾನಿ ಕಾಣಲಿಲ್ಲ.ಆದರೆ ಕಾಂಗ್ರೆಸ್ ನಾಯಕರಾದ ಬಿ ಕೆ ಹರಿಪ್ರಸಾದ್ ಪ್ರತಿಭಟನೆಗೆ ಬಂದು ಭಾಗವಹಿಸಿದರು.

ದೆಹಲಿಯಲ್ಲಿ ನಾನು ಗೌರಿ ಪ್ರತಿಭಟನೆ ನಡೆಯಿತು.ಆದರೆ ಮುಂದೇನು ರಾಜ್ಯ ಸರ್ಕಾರ ಹಂತಕರನ್ನು ಯಾವಾಗ ಹಿಡಿಯುತ್ತದೆ ಎಂಬ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಉತ್ತರ ಕೊಡಬೇಕು