ಮಲಯಾಳಿ ನಟಿ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಗ್ಯಾಂಗ್‌ಸ್ಟರ್ಸ್‌‌ ಗುಂಡಿನ ದಾಳಿ ನಡೆಸಿದ್ದಾರೆ. 

ಕೊಚ್ಚಿ, [ಡಿ.15]: ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಇಂದು [ಶನಿವಾರ] ಗ್ಯಾಂಗ್‌ಸ್ಟರ್ಸ್‌‌ ಗುಂಡಿನ ದಾಳಿ ನಡೆಸಿದ್ದಾರೆ. 

ಬೈಕ್ ಮೇಲೆ ಬಂದ ಇಬ್ಬರು ಯುವಕರು ಏಕಾಏಕಿ ಪನಾಂಪಿಲ್ಲಿ ನಗರದಲ್ಲಿರುವ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

 ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಂಬೈ ಭೂಗತ ಪಾತಕಿ ರವಿ ಪೂಜಾರಿ ಸಹಚರರು ಈ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

ಈ ಹಿಂದೆ ದೂರವಾಣಿ ಕರೆ ಮಾಡಿ 25 ಕೋಟಿ ರುಪಾಯಿಗೆ ಇಟ್ಟಿದ್ದರು ಎಂದು ಲೀನಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಈ ಗುಂಡಿನ ದಾಳಿಯಿಂದಾಗಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.