ಹಾಸ್ಟೆಲ್ ಒಂದರಲ್ಲಿ ಕಾಲೇಜು ಹುಡುಗರ ಮಧ್ಯೆ ನಡೆದ ಗ್ಯಾಂಗ್ ವಾರ್'ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಅಂಜನಾನಗರದ ಬಳಿಯ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದಿದೆ. ರೋಹಿತ್ ಮೃತ ವಿದ್ಯಾರ್ಥಿಯಾಗಿದ್ದು,  ಅಪರೇಷಪ್ಪ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಂಗಳೂರು(ಮಾ.24): ಹಾಸ್ಟೆಲ್ ಒಂದರಲ್ಲಿ ಕಾಲೇಜು ಹುಡುಗರ ಮಧ್ಯೆ ನಡೆದ ಗ್ಯಾಂಗ್ ವಾರ್'ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಅಂಜನಾನಗರದ ಬಳಿಯ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದಿದೆ. ರೋಹಿತ್ ಮೃತ ವಿದ್ಯಾರ್ಥಿಯಾಗಿದ್ದು, ಅಪರೇಷಪ್ಪ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ರಾತ್ರಿ 10.30ರ ಸುಮಾರಿಗೆ ರವೀಶ್ ಎಂಬ ವಿದ್ಯಾರ್ಥಿ, ಕುಡಿದು ಬಂದು ಶೌಚಾಲಯದ ಬಾಗಿಲು ತೆರೆದಿಟ್ಟುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ರೋಹಿತ್ ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದು ಗಲಾಟೆ ಶುರು ಆಗಿದೆ. ಈ ವೇಳೆ ರವೀಶ್ ಕುಡಿದ ಮತ್ತಿನಲ್ಲಿ ರೋಹಿತ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಡೆಯಲು ಬಂದ ಅಮರೇಷಪ್ಪ ಮೇಲೂ ಚಾಕುವಿನಿಂದ ಇರಿದಿದ್ದಾನೆ.

ನೆಲಮಂಗಲದ ಸೋಲೂರು ಮೂಲದ ರೋಹಿತ್ ಹಾಗೂ ಅಮರೇಷಪ್ಪ ಇಬ್ರು ಸಹ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದರು. ಇದಲ್ಲದೆ ರವೀಶ್ ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈ ಕುರಿತಂತೆ ಬ್ಯಾಡರಹಳ್ಳಿ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರವೀಶ್ ಗಾಗಿ ಬಲೆ ಬೀಸಿದ್ದಾರೆ.

ಮೂತ್ರ ವಿಸರ್ಜನೆ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಬೆಂಗಳೂರಿನ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್