'ಸಿದ್ದರಾಮಯ್ಯ ನನ್ನ ಬಳಿ ಬಿಕ್ಷೆ ಬೇಡಿದರೆ ಎಡಗೈನಲ್ಲಿ ಬಿಕ್ಷೆ ನೀಡುತ್ತೇನೆ': ಜನಾರ್ಧನ ರೆಡ್ಡಿ

First Published 14, Jan 2018, 9:26 PM IST
Gali Janardhana Reddy Targets Congress and CM Siddaramaiah
Highlights

ನಗರದಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರೆಡ್ಡಿ, 'ಸುಳ್ಳು ಆರೋಪಗಳನ್ನು ಮಾಡಿ 42 ತಿಂಗಳು ನನ್ನ ಜೈಲಿನಲ್ಲಿ ಇರಿಸಿದ್ದ ಕಾಂಗ್ರೆಸ್, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ನನ್ನನ್ನು ಏನು ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ, ನನ್ನಿಂದ ಬಿಡಿಗಾಸು ರಿಕವರಿ ಮಾಡಲು ಸಾಧ್ಯವಾಗಿಲ್ಲ' ಎಂದು ವ್ಯಂಗ್ಯವಾಡಿದರು.

ಆನೇಕಲ್(ಜ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ನನ್ನಿಂದ ಬಿಡಿಗಾಸು ಸಹ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದವರು ನನ್ನ ಬಳಿ ಬಿಕ್ಷೆ ಬೇಡಿದರೆ ಎಡಗೈನಲ್ಲಿ ಬಿಕ್ಷೆ ನೀಡುತ್ತೇನೆಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರೆಡ್ಡಿ, 'ಸುಳ್ಳು ಆರೋಪಗಳನ್ನು ಮಾಡಿ 42 ತಿಂಗಳು ನನ್ನ ಜೈಲಿನಲ್ಲಿ ಇರಿಸಿದ್ದ ಕಾಂಗ್ರೆಸ್, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ನನ್ನನ್ನು ಏನು ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ, ನನ್ನಿಂದ ಬಿಡಿಗಾಸು ರಿಕವರಿ ಮಾಡಲು ಸಾಧ್ಯವಾಗಿಲ್ಲ' ಎಂದು ವ್ಯಂಗ್ಯವಾಡಿದರು.

ಮುಂದೆ ದೇವರ ಆಶಿರ್ವಾದ ಸಿಕ್ಕರೆ, ಬಿಜೆಪಿ ಪಕ್ಷ ಟಿಕೆಟ್ ಕೊಟ್ಟರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಯಾವ ದುಸ್ಥಿಗೆ ತರುತ್ತೇನೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇವೇಳೆ ಇನ್ಮುಂದೆ ನಾನು ಸಾಯುವವರೆಗೂ ರೈತನ ಪೋಷಾಕು ಪಂಚೆಯನ್ನೇ ಧರಿಸುತ್ತೇನೆಂದು ರೆಡ್ಡಿ ಘೋಷಣೆ ಮಾಡಿದರು.

loader