ಗುಜರಾತ್ ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ 3 ಸ್ಥಾನಗಳಿಗಾಗಿ ಮಂಗಳವಾರ ಚುನಾವಣೆ ನಡೆಯಲಿದೆ. 3 ಸ್ಥಾನಗಳಿಗಾಗಿ ಬಿಜೆಪಿ ಅಭ್ಯರ್ಥಿಗಳಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್‌'ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಲ್ವಂತ್‌ ಸಿಂಗ್ ರಜಪೂತ್ ಕಣಕ್ಕೆ ಇಳಿದಿದ್ದಾರೆ.

ಅಹಮದಾಬಾದ್(ಆ.07): ಗುಜರಾತ್ ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ 3 ಸ್ಥಾನಗಳಿಗಾಗಿ ಮಂಗಳವಾರ ಚುನಾವಣೆ ನಡೆಯಲಿದೆ. 3 ಸ್ಥಾನಗಳಿಗಾಗಿ ಬಿಜೆಪಿ ಅಭ್ಯರ್ಥಿಗಳಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್‌'ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಲ್ವಂತ್‌ ಸಿಂಗ್ ರಜಪೂತ್ ಕಣಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ನಿಂದ, ಪಕ್ಷದ ಅಧ್ಯಕ್ಷೆ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಕಣಕ್ಕೆ ಇಳಿದಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ ಅಮಿತ್ ಶಾ ಮತ್ತು ಸ್ಮತಿ ಇರಾನಿ ಆಯ್ಕೆಯಾಗುವುದು ಖಚಿತವಿದೆ. ಪಕ್ಷದಿಂದ ಲಭ್ಯವಿರುವ ಹೆಚ್ಚುವರಿ ಮತ ಮತ್ತು ಕಾಂಗ್ರೆಸ್ ಬಂಡಾಯ ಶಾಸಕರ ಮತವನ್ನು ಪಡೆದು ಬಲ್ವಂತ್‌ಸಿಂಗ್‌ ರನ್ನು ಗೆಲ್ಲಿಸುವ ತಂತ್ರಗಾರಿಕೆಯಲ್ಲಿ ಬಿಜೆಪಿ ಇದೆ. ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ತನ್ನ 40ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿಯಿಂದ ರಕ್ಷಿಸಿಕೊಳ್ಳಲು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ.

ಇದರ ಹೊರತಾಗಿಯೂ ಅಹಮದ್ ಪಟೇಲ್ ಸೋಲಿಸುವ ಮೂಲಕ ಸೋನಿಯಾಗೆ ಮುಜುಗರ ಉಂಟುಮಾಡಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಅಹಮದ್ ಪಟೇಲ್ ಗೆಲ್ಲಲು ೪೫ ಮತಗಳ ಅವಶ್ಯಕತೆ ಇದೆ. ಸದ್ಯ ಕಾಂಗ್ರೆಸ್‌ನ ಬಲ ೫೧ ಮತಗಳು.