ಯಲಬುರ್ಗಾ ಪಟ್ಟಣದ 12ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನ ಸ್ವಂತ ಕೊಳವೆಬಾವಿಯಿಂದ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಆತ ಮಾಡುತ್ತಿರುವ ಈ ಸಮಾಜ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

ಕೊಪ್ಪಳ: ಬೇಸಿಗೆಯಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಪಟ್ಟಣದ ಹೊರವಲಯದಲ್ಲಿ ಇರುವ ೧೨ನೇ ವಾರ್ಡಿಗೆ ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನದೇ ಬೋರ್‌ಬೆಲ್ ಮೂಲಕ ನಿವಾಸಿಗಳಿಗೆ ನೀರು ಪೂರೈಕೆ ಮಾಡುವ ಮೂಲಕ ಸೈ ಎನಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಚಿತವಾಗಿ ನೀರು ಸರಬರಾಜು

12ನೇ ವಾರ್ಡ್‌ನಲ್ಲಿ ಮೂರ್ನಾಲ್ಕು ದಿನಗಳಿಂದ ಮೋಟರ್ ದುರಸ್ತಿ, ಪೈಪ್‌ಲೈನ್ ಸಮಸ್ಯೆಯಿದೆ. ಸರಿಯಾದ ಸಮಯಕ್ಕೆ ದುರಸ್ತಿಯಾಗದ ಕಾರಣ ನೀರಿನ ತೊಂದರೆಯಾಗಿದೆ. ಅದೇ ವಾರ್ಡ್‌ನ ನಿವಾಸಿ ಶಿವಕುಮಾರ ಮ್ಯಾಗೇರಿ ತನ್ನದೇ ಸ್ವಂತ ಕೊಳವೆಬಾವಿಯ ನೀರನ್ನು ಆಶ್ರಯ ಕಾಲನಿ ನಿವಾಸಿಗಳಿಗೆ ಸರಬರಾಜು ಮಾಡುತ್ತಿದ್ದಾನೆ. ಸ್ವತಃ ತಾನೇ ಮುಂದೆ ನಿಂತು ಪ್ರತಿಯೊಂದು ಮನೆಗೂ ನೀರು ತಲುಪುವಂತೆ ನೋಡಿಕೊಳ್ಳುತ್ತಿರುವುದು ವಿಶೇಷ.

ಶಿವಕುಮಾರ ಅವರ ಸಾಮಾಜಿಕ ಕಾರ್ಯವನ್ನು ನಿವಾಸಿಗಳು ಮೆಚ್ಚಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುತ್ತಿದ್ದು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯ

ವಾರ್ಡ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನೀರಿನ ಸಮಸ್ಯೆಯಾಗಿದೆ. ನಮ್ಮದೇ ವಾರ್ಡಿನ ಯುವಕ ಶಿವಕುಮಾರ ಅವರು ತಮ್ಮ ಸ್ವಂತ ಬೋರ್‌ವೆಲ್ ಮೂಲಕ ನೀರು ಪೂರೈಸುತ್ತಿದ್ದಾರೆ. ಅವರ ಸಾಮಾಜಿಕ ಕಾರ್ಯ ಮೆಚ್ಚುವಂಥದ್ದು ಎಂದು ವಾರ್ಡ್ ನಿವಾಸಿಯಾಗಿರುವ ಮಲ್ಲಪ್ಪ ಹೇಳುತ್ತಾರೆ.

ನನ್ನ ಸ್ವಂತ ಬೋರ್‌ವೆಲ್ ಮತ್ತು ನೀರಿನ ಟ್ಯಾಂಕರ್ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾದಾಗ ಉಚಿತವಾಗಿ ಮನೆ ಮನೆಗೆ ಪೂರೈಕೆ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ, ಶಿವಕುಮಾರ್ ಮ್ಯಾಗೇರಿ ಹೇಳುತ್ತಾರೆ.