ಧಾರವಾಡದ ಆರ್‌ಎಲ್‌ಎಸ್ ಹೈಸ್ಕೂಲಿನ 1999-2000ನೇ ಸಾಲಿನ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ತಮ್ಮ ಸಹಪಾಠಿ ನಬಿಸಾಬ್ ಚಣಕನ್ನವರ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಸಹಪಾಠಿ ನಾಗರಾಜ ಜಾವೂರ ಅವರು ಮೃತನ ಮಗನ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಧಾರವಾಡ: ಇಲ್ಲಿಯ ಆರ್‌ಎಲ್‌ಎಸ್ ಹೈಸ್ಕೂಲಿನ 1999-2000ನೇ ಸಾಲಿನ ವಿದ್ಯಾರ್ಥಿ ನಬಿಸಾಬ್ ಚಣಕನ್ನವರ ಇತ್ತೀಚೆಗೆ ಅಕಾಲಿಕವಾಗಿ ನಿಧನರಾಗಿದ್ದು, ಈತನ ಸ್ನೇಹಿತರು ಆತನ ಕುಟುಂಬಕ್ಕೆ ಭಾನುವಾರ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದರು.
ಪ್ರಮುಖವಾಗಿ ನಬೀಸಾಬ ಸಹಪಾಠಿ ಹಾಗೂ ವಕೀಲರೂ ಆಗಿರುವ ನಾಗರಾಜ ಜಾವೂರ ಅವರು, ಮೃತ ಸ್ನೇಹಿತನ ಪುತ್ರ ಅರೇ ವೈದ್ಯಕೀಯ ಓದುತ್ತಿದ್ದು, ಕಾಲೇಜಿನ ಶೈಕ್ಷಣಿಕ ವೆಚ್ಚದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯ ಕೊಡಿಸುವ ಮತ್ತು ಮೃತ ಸ್ನೇಹಿತನ ಮಗನಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ನೌಕರಿ ಕೊಡಿಸಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸ್ವಯಂ ಆಗಿ ಜವಾಬ್ದಾರಿ ತೆಗೆದುಕೊಂಡಿರುವುದು ಸಮಾಜಕ್ಕೆ ಮಾದರಿ. ಈ ಸಂದರ್ಭದಲ್ಲಿ 1999-2000 ಬ್ಯಾಚ್ ವಿದ್ಯಾರ್ಥಿಗಳಿದ್ದರು.
ಧಾರವಾಡದ ಆರ್‌ಎಲ್‌ಎಸ್ ಹೈಸ್ಕೂಲಿನ 1999-2000ನೇ ಸಾಲಿನ ವಿದ್ಯಾರ್ಥಿ ನಬಿಸಾಬ್ ಚಣಕನ್ನವರ ನಿಧನದಿಂದ ಆತನ ಬ್ಯಾಚ್‌ನ ಎಲ್ಲ ಸ್ನೇಹಿತರು ಆತನ ಕುಟುಂಬಕ್ಕೆ ಭಾನುವಾರ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದರು.


